Horoscope Today: ಇಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಶ್ರಾವಣ ಶನಿವಾರದ ವಿಶೇಷ ದಿನ!

Updated on: Aug 15, 2026 | 6:36 AM

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 15, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಶ್ರಾವಣ ಶನಿವಾರದ ಪವಿತ್ರ ಸಂಯೋಗದಿಂದ ವಿಶೇಷ ಮಹತ್ವವನ್ನು ಪಡೆದಿದೆ. ಗುರೂಜಿ ಅವರು, ಈ ದಿನವನ್ನು ದೇಶಕ್ಕಾಗಿ ಹೋರಾಡಿದ ಮಹನೀಯರ ಸ್ಮರಣೆ ಹಾಗೂ ಆತ್ಮಾವಲೋಕನಕ್ಕೆ ಮೀಸಲಿಡುವಂತೆ ಕರೆ ನೀಡಿದ್ದಾರೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 15, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಶ್ರಾವಣ ಶನಿವಾರದ ಪವಿತ್ರ ಸಂಯೋಗದಿಂದ ವಿಶೇಷ ಮಹತ್ವವನ್ನು ಪಡೆದಿದೆ.

ಗುರೂಜಿ ಅವರು, ಈ ದಿನವನ್ನು ದೇಶಕ್ಕಾಗಿ ಹೋರಾಡಿದ ಮಹನೀಯರ ಸ್ಮರಣೆ ಹಾಗೂ ಆತ್ಮಾವಲೋಕನಕ್ಕೆ ಮೀಸಲಿಡುವಂತೆ ಕರೆ ನೀಡಿದ್ದಾರೆ. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂಬ ಮಾತನ್ನು ನೆನಪಿಸುತ್ತಾ, ದೇಶದ ಪ್ರಗತಿಗೆ ನಮ್ಮ ಕೊಡುಗೆಯ ಬಗ್ಗೆ ಚಿಂತಿಸಲು ಪ್ರೇರೇಪಿಸಿದ್ದಾರೆ. ಗ್ರಹಗತಿಗಳ ಬಗ್ಗೆ ವಿವರಿಸಿದ ಅವರು, ರವಿಯು ಕರ್ಕಾಟಕ ರಾಶಿಯಲ್ಲೂ, ಚಂದ್ರನು ಸಿಂಹ ರಾಶಿಯ ಪುಬ್ಬಾ ನಕ್ಷತ್ರದಲ್ಲೂ (ಶುಕ್ರನ ನಕ್ಷತ್ರ) ಸಂಚಾರ ಮಾಡುವುದರಿಂದ ಪ್ರತಿಯೊಂದು ರಾಶಿಯ ಮೇಲೂ ವಿಭಿನ್ನ ಪರಿಣಾಮಗಳುಂಟಾಗಲಿವೆ ಎಂದು ತಿಳಿಸಿದರು.

 

Loading...
Unable to load recommendations.
Follow Us