Horoscope Today: ಇಂದು ಕಾಲಾಷ್ಟಮಿ; ಕಾಲಭೈರವನ ಆರಾಧನೆಗೆ ಸೂಕ್ತ ದಿನ
ನವೆಂಬರ್ 02, ಸೋಮವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ನವೆಂಬರ್ 02, ಸೋಮವಾರದ ದ್ವಾದಶ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಶ್ವೀಜ ಮಾಸದ ಶರದೃತು, ಕೃಷ್ಣಪಕ್ಷ ಅಷ್ಟಮಿ ತಿಥಿ, ಪುಷ್ಯ ನಕ್ಷತ್ರವಿರುವ ಈ ದಿನ ರಾಹುಕಾಲ ಬೆಳಗ್ಗೆ 7:39 ರಿಂದ 9:07 ರವರೆಗೆ ಇರುತ್ತದೆ. ಸಂಕಲ್ಪಕಾಲ ಬೆಳಗ್ಗೆ 9:08 ರಿಂದ 10:35 ರವರೆಗೆ ಇದೆ.
ಇಂದು ಮಹಾ ವಿಶೇಷವಾದ ಕಾಲಾಷ್ಟಮಿ ದಿನವಾಗಿದ್ದು, ಇದು ಪ್ರತಿ ತಿಂಗಳು ಕೃಷ್ಣಪಕ್ಷದ ಅಷ್ಟಮಿ ತಿಥಿಯಂದು ಆಚರಿಸಲಾಗುತ್ತದೆ. ಪರಶಿವನ ಉಗ್ರ ರೂಪವಾದ ಕಾಲಭೈರವನ ಆರಾಧನೆಗೆ ಇದು ಸೂಕ್ತ ದಿನವಾಗಿದೆ. ಬ್ರಹ್ಮದೇವರ ಅಹಂಕಾರವನ್ನು ಮುರಿಯಲು ಕಾಲಭೈರವನು ಸೃಷ್ಟಿಯಾದ ದಿನವೆಂದು ನಂಬಲಾಗಿದೆ. ಆರೋಗ್ಯ, ಆರ್ಥಿಕ ಸಮಸ್ಯೆಗಳು, ಗೊಂದಲಗಳು, ದುಷ್ಟ ಶಕ್ತಿಗಳ ನಿಗ್ರಹಕ್ಕಾಗಿ ಸಂಧ್ಯಾಕಾಲದಲ್ಲಿ ಶಿವನ ದರ್ಶನ ಪಡೆಯುವುದು ಉತ್ತಮ. ಶಿವನ ದೇವಸ್ಥಾನದಲ್ಲಿ ಜೋಡಿ ದೀಪ ಹಚ್ಚಿ ಓಂ ನಮಃ ಶಿವಾಯ ಮಂತ್ರ ಜಪಿಸುವುದರಿಂದ ಕಾಲಾಷ್ಟಮಿಯ ಪರಿಪೂರ್ಣ ಬಲ ದೊರೆಯುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
