Horoscope Today: ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ

Updated on: Nov 04, 2026 | 6:43 AM

ನವೆಂಬರ್ 04, ಬುಧವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ನವೆಂಬರ್ 04, ಬುಧವಾರದ ದ್ವಾದಶ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ. ಇದು ಪರಾಭವನಾಮ ಸಂವತ್ಸರದ, ದಕ್ಷಿಣಾಯನ, ಅಶ್ವಿಜ ಮಾಸದ, ಶರದೃತು ಕೃಷ್ಣಪಕ್ಷ ದಶಮಿ, ಮಖಾ ನಕ್ಷತ್ರದ, ಬ್ರಹ್ಮಯೋಗ ಮತ್ತು ಭದ್ರಕರಣ ಇರತಕ್ಕಂತ ದಿನವಾಗಿದೆ.

ಈ ದಿನದ ರಾಹುಕಾಲ ಮಧ್ಯಾಹ್ನ 12:02 ರಿಂದ 1:30 ರ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲವು ಬೆಳಗ್ಗೆ 10:35 ರಿಂದ 12:03 ರವರೆಗೆ ಇರುತ್ತದೆ. ಬುಧವಾರವು ಸಾಕ್ಷಾತ್ ವಿಷ್ಣು, ವಿನಾಯಕ ಮತ್ತು ಕಾಲಭೈರವನ ಲಹರಿಗಳ ಪರ್ವ ದಿನವಾಗಿದೆ. ರವಿಯು ತುಲಾ ರಾಶಿಯಲ್ಲಿ, ಚಂದ್ರನು ಸಿಂಹ ರಾಶಿಯ ಮಖಾ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ ಎಂದು ಗುರೂಜಿ ತಿಳಿಸಿದ್ದಾರೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More