ಕರ್ನಾಟಕದ ರಾಮಮಂದಿರಗಳಲ್ಲಿರೋದು ರಾಮ, ಲಕ್ಷ್ಮಣ ಸೀತೆಯರಲ್ಲವೇ? ಸಿದ್ದರಾಮಯ್ಯ

|

Updated on: Jan 23, 2024 | 3:07 PM

ಬಿಜೆಪಿಯವರಿಗೆ ರಾಮನ ವಿಷಯದಲ್ಲಿ ರಾಜಕಾರಣ ಮಾಡಬೇಕಿದೆ ಅದನ್ನೇ ಅವರು ಮಾಡುತ್ತಿರೋದು. ಆದರೆ ತಾವು ಪೂಜಿಸೋದು ಮತ್ತು ಆರಾಧಿಸೋದು ಮಹಾತ್ಮಾ ಗಾಂಧಿ ಹೇಳಿದ ರಾಮನನ್ನು, ರಾಮಾಯಣದ ರಾಮ ಮತ್ತು ದಶರಥನ ಮಗ ರಾಮನನ್ನು, ಬಿಜೆಪಿಯ ರಾಮನಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ (Ram in Ayodhya) ಮತ್ತು ಕರ್ನಾಟಕದ ರಾಮಮಂದಿರಗಳಲ್ಲಿರುವ ರಾಮ ಬೇರೆ ಬೇರೆನಾ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಬಿಜೆಪಿಯವರು ಮೂರು ಕೋಟಿ ಕನ್ನಡಿಗರನ್ನು (3 crore Kannadigas) ಅಯೋಧ್ಯೆಗೆ ಕರೆದೊಯ್ಯುತ್ತಾರಂತೆ ಅಂತ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕರ್ನಾಟಕದ ಅನೇಕ ಊರುಗಳಲ್ಲಿ ರಾಮಮಂದಿರಗಳಲ್ಲಿರೋದು ರಾಮನಲ್ಲವೇ? ಆ ಮಂದಿರಗಳಲ್ಲಿರೋದು ಲಕ್ಷ್ಮಣ, ಸೀತೆ ಮತ್ತು ಆಂಜನೇಯನ ಮೂರ್ತಿಗಳಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿಯವರಿಗೆ ರಾಮನ ವಿಷಯದಲ್ಲಿ ರಾಜಕಾರಣ ಮಾಡಬೇಕಿದೆ ಅದನ್ನೇ ಅವರು ಮಾಡುತ್ತಿರೋದು. ಆದರೆ ತಾವು ಪೂಜಿಸೋದು ಮತ್ತು ಆರಾಧಿಸೋದು ಮಹಾತ್ಮಾ ಗಾಂಧಿ ಹೇಳಿದ ರಾಮನನ್ನು, ರಾಮಾಯಣದ ರಾಮ ಮತ್ತು ದಶರಥನ ಮಗ ರಾಮನನ್ನು, ಬಿಜೆಪಿಯ ರಾಮನಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Tue, 23 January 24

Follow us on