ಒಬ್ಬ ವ್ಯಕ್ತಿಯನ್ನು ಬಹಳಷ್ಟು ಹಚ್ಚಿಕೊಂಡು, ಅವರನ್ನು ಪ್ರೀತಿ ಮಾಡುತ್ತಿದ್ದಾಗ, ಧಿಡೀರನೆ ಅವರು ಬಿಟ್ಟು ಹೋದರೆ ಮನಸ್ಸಿಗೆ ಆಗುವ ನೋವು ಅಷ್ಟಿಷ್ಟಲ್ಲ. ಹೇಳಲು ಅಸಾಧ್ಯವಾದಂತಹ ವೇದನೆ. ಜೀವನವೇ ಸಾಕು ಅನ್ನಿಸಿಬಿಡುತ್ತದೆ. ಇದರಿಂದ ಸಾಕಷ್ಟು ಜನರು ಮಾನಸಿಕವಾಗಿ ಕನ್ನತೆಗೆ ಒಳಗಾಗುತ್ತಾರೆ. ಇನ್ನೂ ಕೆಲವರಂತು ತಪ್ಪು ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಈ ಯೌವನಾವಸ್ತೆಯಲ್ಲಿ ಹುಡುಗ-ಹುಡಗಿ ಮಧ್ಯೆ ಆಗುವಂತಹ ಪ್ರೀತಿ ಅದ್ಭುತ. ಎರಡು ದೇಹ ಒಂದೇ ಜೀವ ಎಂಬಂತೆ ಇರುತ್ತಾರೆ. ಆದರೆ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ವೈಮನಸ್ಸು ಉಂಟಾಗಿ ಅಥವಾ ಇನ್ನಾವುದೋ ಕಾರಣಕ್ಕೆ ದೂರವಾಗಿ ಅನುಭವಿಸುವ ವೇದನೆ, ರೋದನೆ ಹೇಳತೀರದು. ಹಾಗಿದ್ದರೆ ಲವ್ ಫೇಲುವರ್ ಆದರೆ, ಅದರಿಂದ ಹೊರ ಬರುವುದು ಹೇಗೆ? ಎನ್ನುವುದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ
Published On - 7:42 am, Tue, 30 August 22