Lifestyle: ನಮಗಾಗಿ ನಾವು ಬದುಕೋದು ಹೇಗೆ? ಉತ್ತಮ ಜೀವನಕ್ಕಾಗಿ ಈ ಸರಳ ಸೂತ್ರಗಳನ್ನು ಪಾಲಿಸಿ

| Updated By: ganapathi bhat

Updated on: Mar 07, 2022 | 9:32 AM

ನಮಗಾಗಿ ನಾವು ಬದುಕೋಣ. ಚೆನ್ನಾಗಿಯೇ ಬದುಕು ಸಾಗಿಸೋಣ. ಈ ಬಗ್ಗೆ ಆಪ್ತ ಸಮಾಲೋಚಕಿ ಡಾ. ಸೌಜನ್ಯಾ ವಸಿಷ್ಠ ಮುಖ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕಾಗಿ ಸಂಪೂರ್ಣ ವಿಡಿಯೋ ನೋಡಿ.

ನಾವು ಬೇರೆಯವರ ಅಭಿಪ್ರಾಯಕ್ಕಾಗಿ ಜೀವನ ನಡೆಸುವುದನ್ನು ಬಿಡಬೇಕು. ಬೇರೆಯವರಿಗೋಸ್ಕರ ಮಾಡುತ್ತೇವೆ, ಬೇರೆಯವರಿಗೋಸ್ಕರನೇ ಬದುಕುತ್ತೇವೆ ಎಂಬುದು ಒಳ್ಳೆಯದಲ್ಲ. ಜೀವನ ಎನ್ನುವುದು ಸಣ್ಣ ಪ್ರಯಾಣ. ಇಲ್ಲಿ ನಾವು ಇಷ್ಟ ಪಟ್ಟಹಾಗೆ ನಾವು ಇರಬೇಕು. ಜೀವನ ಒಂದು ಒಂದು ಸಂಭ್ರಮವಾದರೆ, ಇಲ್ಲಿ ನಮ್ಮ ಇಷ್ಟದಂತೆ ನಾವು ಬದುಕುವುದು ಮುಖ್ಯ. ಸಮಾಜಕ್ಕೆ ತೋರ್ಪಡಿಸಲು, ತೋರಿಕೆಗೆ, ಮತ್ತೊಬ್ಬರ ಮೆಚ್ಚುಗೆಗೆ ಜೀವನ ನಡೆಸಬಾರದು.

ಪ್ರತಿ ದಿನ ನಾವು ನಮಗಾಗಿ ಬದುಕಬೇಕು. ನಮ್ಮನ್ನು ಟೀಕಿಸುವವರು, ನಮ್ಮನ್ನು ಆಗದವರು ಹೀಗೆ ವಿಭಿನ್ನ ಜನರು ಇರಬಹುದು. ಆದರೆ ಅದನ್ನು ಗಮನಿಸಿ ನಾವು ಚಿಂತೆಗೆ ಒಳಗಾಗಬಾರದು. ನಾವು ಬೇರೆಯವರಿಗಾಗಿ ಬದುಕುವುದನ್ನು ಬಿಡೋಣ. ನಮ್ಮ ಜೀವನದ ನಿರ್ಧಾರ ನಮ್ಮ ಕೈಯಲ್ಲಿ ಇರಲಿ. ನಿಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿ ತುಂಬಾ ಮುಖ್ಯ, ಅದು ಯಾರು ಅಂದ್ರೆ ನೀವೇ! ಮುಂದೆ 70-80 ವರ್ಷ ಆದಾಗ ನಾನು ಯಾರಿಗಾಗಿ ಬದುಕಿದೆ ಎಂದು ಅನಿಸಬಾರದು. ಹಾಗಾಗಿ ನಮಗಾಗಿ ನಾವು ಬದುಕೋಣ. ಚೆನ್ನಾಗಿಯೇ ಬದುಕು ಸಾಗಿಸೋಣ. ಈ ಬಗ್ಗೆ ಆಪ್ತ ಸಮಾಲೋಚಕಿ ಡಾ. ಸೌಜನ್ಯಾ ವಸಿಷ್ಠ ಮುಖ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕಾಗಿ ಸಂಪೂರ್ಣ ವಿಡಿಯೋ ನೋಡಿ.

ಇದನ್ನೂ ಓದಿ: Personality Development: ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಬೇಕೆ? ಹಾಗಿದ್ದರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಇದನ್ನೂ ಓದಿ: Mental health: ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಆಹಾರದ ಕ್ರಮ ಹೀಗಿರಲಿ

Follow us on