ಕುಂದಾಪುರದ​ ಅಕ್ಕಿ ಹಪ್ಪಳ ತಯಾರಿಸುವುದು ಹೇಗೆ ಗೊತ್ತಾ? ವಿಶಿಷ್ಟವಾದ ಫೇಮಸ್ ರೆಸಿಪಿ ಮಾಡಿ ಸವಿಯಿರಿ
ಅಕ್ಕಿ ಹಪ್ಪಳ

ಕುಂದಾಪುರದ​ ಅಕ್ಕಿ ಹಪ್ಪಳ ತಯಾರಿಸುವುದು ಹೇಗೆ ಗೊತ್ತಾ? ವಿಶಿಷ್ಟವಾದ ಫೇಮಸ್ ರೆಸಿಪಿ ಮಾಡಿ ಸವಿಯಿರಿ

| Updated By: shruti hegde

Updated on: Jun 20, 2021 | 10:23 AM

ಊಟದಲ್ಲಿ ಏನಾದರೂ ರುಚಿಕರವಾದ ತಿಂಡಿ ಇದ್ದರೆ ಅಂದಿನ ಊಟ ಭರ್ಜರಿಯಲ್ಲಿ ಭರ್ಜರಿ. ಊಟಕ್ಕೊಂದೇ ಅಲ್ಲ! ಸಂಜೆಯ ವೇಳೆ ಚಹ ಕುಡಿಯುತ್ತಾ ಅಕ್ಕಿ ದೊಡ್ನಾ ಸವಿಯಬಹುದು. 

ಹಪ್ಪಳ ಅಂದತಕ್ಷಣ ಗರಿಗರಿಯಾಗಿ ಬಿಸಿ ಬಿಸಿಯಾಗಿರುತ್ತದೆ ಎಂಬ ಕಲ್ಪನೆ ಸಹಜ. ಈ ರೆಸಿಪಿಗೆ ಕರಾವಳಿ ಭಾಗದಲ್ಲಿ ಅಕ್ಕಿ ದೊಡ್ನಾ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಕಡುಬು ತಯಾರಿಸುವ ರೀತಿಯಲ್ಲಿಯೇ ಈ ಅಕ್ಕಿ ದೊಡ್ನವನ್ನು ತಯಾರಿಸುತ್ತಾರೆ. ವಿಶಿಷ್ಟ ಅನಿಸಿರಬೇಕಲ್ವೇ? ಮನೆಯಲ್ಲಿ ಮಾಡಿ ಸವಿಯಿರಿ, ರುಚಿಕರವಾದ ತಿನಿಸುಗಳನ್ನು ಸಿದ್ಧ ಮಾಡುವ ವಿಧಾನ ಎದುರಿಗಿದ್ದಾಗ ಮಾಡದೇ ಇರಲು ಸಾಧ್ಯವೇ?

 

ಊಟದಲ್ಲಿ ಏನಾದರೂ ರುಚಿಕರವಾದ ತಿಂಡಿ ಇದ್ದರೆ ಅಂದಿನ ಊಟ ಭರ್ಜರಿಯಲ್ಲಿ ಭರ್ಜರಿ. ಊಟಕ್ಕೊಂದೇ ಅಲ್ಲ! ಸಂಜೆಯ ವೇಳೆ ಚಹ ಕುಡಿಯುತ್ತಾ ಅಕ್ಕಿ ದೊಡ್ನಾ ಸವಿಯಬಹುದು.  ಹೀಗಿದ್ದಾಗ ರುಚಿಕರವಾದ ಅಕ್ಕಿ ಹಪ್ಪಳ(ದೊಡ್ನಾ) ತಯಾರಿಸುವುದು ಹೇಗೆ ಎಂಬುದನ್ನು ತಿಳಿದಿರಬೇಕಲ್ಲವೇ.

ಚಿಕ್ಕ-ಮಕ್ಕಳಿಂದ ಹಿಡಿದು ವಯಸ್ಕರವೆರೆಗೂ ಅಕ್ಕಿ ದೊಡ್ನ ಇಷ್ಟವಾಗುತ್ತದೆ. ಅದರಲ್ಲಿಯೂ ಕುಂದಾಪುರ ಶೈಲಿಯ ಅಕ್ಕಿ ಹಪ್ಪಳ ಹೇಗಿರುತ್ತದೆ? ಮಾಡುವ ವಿಧಾನ ಹೇಗೆ ಎಂಬುದನ್ನು ಉಡುಪಿಯಿಂದ ಶೈಲಮಯ ಎನ್ನುವವರು ತಿಳಿಸಿಕೊಟ್ಟಿದ್ದಾರೆ. ನೀವೂ ನಿಮ್ಮ ಮನೆಯಲ್ಲಿ ಮಾಡಿ ಸವಿಯಬಹುದು.

ಅಕ್ಕಿ ಹಪ್ಪಳ(ದೊಡ್ನಾ) ಮಾಡುವ ವಿಧಾನ
ಶೈಲಮಯ ಅವರು ಹೇಳಿದಂತೆಯೇ ಬಿಳಿ ಅಕ್ಕಿಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ ಸ್ವಚ್ಛವಾಗಿ ಶುದ್ಧ ನೀರಿನಲ್ಲಿ ಅಕ್ಕಿಯನ್ನು ತೊಳೆಯಿರಿ. ನಂತರ ಅಕ್ಕಿ ನೆನೆಯುವಷ್ಟು ನೀರು ಹಾಕಿ 24 ಗಂಟೆಗಳ ಕಾಲ ಅಂದರೆ ಒಂದು ದಿನ ನೆನೆಸಿಡಿ. ಜತೆಗೆ ಇನ್ನೊಂದು ಪಾತ್ರೆಯಲ್ಲಿ ಕಾಲು ಕಪ್​ ಕುಚ್ಚಿಗೆ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ.

ನೆನೆದ ಬಿಳಿ ಅಕ್ಕಿ ಮತ್ತು ಕೊಚ್ಚಿಗೆ ಅಕ್ಕಿಯನ್ನು ನುಣುಪಾಗಿ ಮಿಕ್ಸಿಯಲ್ಲಿ ರುಬ್ಬಿ. ಒಂದು ದಿನ ಹಾಗೆಯೇ ಇಡಿ. ಮರುದಿನ ಆ ಹಿಟ್ಟಿನ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಇನ್ನೊಂದು ಪಾತ್ರೆಯಲ್ಲಿ ಮುಕ್ಕಾಲು ಭಾಗ ನೀರು ಹಾಕಿ ಚೆನ್ನಾಗಿ ಕುದಿಸಿ. ಆ ಪಾತ್ರೆಯ ಮೇಲೆ ಸರಿಯಾಗಿ ಹೊಂದುವ ಪ್ಲೇಟ್​ಅನ್ನು(ಊಟದ ತಟ್ಟೆ) ಇರಿಸಿ. ಸಿದ್ಧವಿರುವ ಅಕ್ಕಿ ಹಿಟ್ಟನ್ನು ಪ್ಲೇಟಿನ ಮೇಲೆ ತೆಳ್ಳಗೆ ಹಾಗಿ. ಒಂದರ ಮೇಲೊಂದು ತಟ್ಟೆಯನ್ನು ಇಟ್ಟು ಎಲ್ಲಾ ತಟ್ಟೆಗೂ ಅಕ್ಕಿ ಹಿಟ್ಟಿನ ಮಿಶ್ರಣವನ್ನು ಹಾಕಿ ನೀರಿನ ಹವೆಯಲ್ಲಿಯೇ ಬೇಯಿಸಿ.

ಇದನ್ನೂ ಓದಿ:

Jackfruit: ಹಲಸಿನ ಹಣ್ಣಿನ ಆರೋಗ್ಯಯುತ ಗುಣಗಳ ಬಗ್ಗೆ ತಿಳಿದರೆ ಒಂದು ಹಣ್ಣನ್ನೂ ಹಾಳು ಮಾಡುವುದಿಲ್ಲ

ಹಲಸಿನ ಹಣ್ಣಿನ ಇಡ್ಲಿ: ಕೊಡವರ ಸಾಂಪ್ರದಾಯಿಕ ತಿಂಡಿಯನ್ನು ಮಾಡಿ ಸವಿಯಿರಿ