Egg Curry: ಸಾವಜಿ ಸ್ಟೈಲ್ ಎಗ್ ಕರಿ ಇಂದೇ ಮಾಡಿ ಸವಿಯಿರಿ
ಮೊಟ್ಟೆ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಮೊಟ್ಟೆ ಫ್ರೈ, ಬಿರಿಯಾನಿ, ಸುಕ್ಕ, ಬೋಂಡಾ, ಹೀಗೆ ಹಲವು ಬಗೆ ಇದೆ. ಹೀಗಾಗಿ ಸಾವಜಿ ಸ್ಟೈಲ್ ಎಗ್ ಕರಿ ಮಾಡುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ.
ನಾನ್ ವೆಜ್ ಪ್ರಿಯರಿಗೆ ದಿನಕ್ಕೆ ಒಂದಿಲ್ಲಾ ಒಂದು ಹೊಸ ತರಹದ ಅಡುಗೆಯನ್ನು ಸವಿಯುವ ಬಯಕೆ ಇರುತ್ತದೆ. ಅದರಲ್ಲೂ ಮೊಟ್ಟೆ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಮೊಟ್ಟೆ ಫ್ರೈ, ಬಿರಿಯಾನಿ, ಸುಕ್ಕ, ಬೋಂಡಾ, ಹೀಗೆ ಹಲವು ಬಗೆ ಇದೆ. ಹೀಗಾಗಿ ಸಾವಜಿ ಸ್ಟೈಲ್ ಎಗ್ ಕರಿ ಮಾಡುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ.
ಸಾವಜಿ ಸ್ಟೈಲ್ ಎಗ್ ಕರಿ ಮಾಡಲು ಬೇಕಾಗುವ ಸಾಮಾಗ್ರಿಗಳು ಬೇಯಿಸಿದ ಮೊಟ್ಟೆ, ಅಡುಗೆ ಎಣ್ಣೆ, ಈರುಳ್ಳಿ, ಟೊಮೆಟೋ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಉಪ್ಪು, ದನಿಯಾ ಪುಡಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಕೊಬ್ಬರಿ,ಕೊತ್ತಂಬರಿ ಕಾಳು, ಗಸಗಸೆ, ಚೆಕ್ಕೆ, ಲವಂಗ, ಏಲಕ್ಕಿ, ಕರಿ ಮೆಣಸು, ಅರಿಶಿಣ ಪುಡಿ.
ಸಾವಜಿ ಸ್ಟೈಲ್ ಎಗ್ ಕರಿ ಮಾಡುವ ವಿಧಾನ
ಮೊದಲು ಕೊಬ್ಬರಿಯನ್ನು ಸುಟ್ಟು, ನಂತರ ದನಿಯಾ, ಗಸಗಸೆ, ಚೆಕ್ಕೆ, ಲವಂಗ, ಏಲಕ್ಕಿ, ಕರಿ ಮೆಣಸು, ಕೊತ್ತಂಬರಿ ಕಾಳು ಹುರಿದು, ರುಬ್ಬಿಕೊಳ್ಳಿ. ಬಳಿಕ ಒಂದು ಪಾತ್ರೆಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ, ಖಾರದ ಪುಡಿ, ದನಿಯಾ ಪುಡಿ, ಅರಿಶಿಣ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದಕ್ಕೆ, ಗರಂ ಮಸಾಲಾ, ರುಬ್ಬಿದ ಮಿಶ್ರಣ ಹಾಕಿ, ಸ್ವಲ್ಪ ನೀರು ಹಾಕಿ ಕುದಿಸಿ. ನಂತರ ಬೇಯಿಸಿದ ಮೊಟ್ಟೆ ಹಾಕಿ, ಕೊತ್ತಂಬರಿ ಸೊಪ್ಪು ಹಾಕಿದರೆ, ಸಾವಜಿ ಸ್ಟೈಲ್ ಎಗ್ ಕರಿ ಸವಿಯಲು ಸಿದ್ಧ.
ಇದನ್ನೂ ಓದಿ:
ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
ಭಾನುವಾರದ ಸ್ಪೆಷಲ್ ಚಿಕನ್ ಚಿಲ್ಲಿ ಪೆಪ್ಪರ್: ಸರಳ ವಿಧಾನದಲ್ಲಿ ಇಂದೇ ಮಾಡಿ ಸವಿಯಿರಿ