ಗಣೇಶ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತರಲು ಗುದುಗಿನ ಹುಗ್ಗಿ ಮಾಡಿ

Edited By:

Updated on: Aug 13, 2021 | 3:20 PM

ಸಿಹಿ ಅಡುಗೆಯನ್ನು ಇಷ್ಟಪಡುವವರಿಗಾಗಿ ಇಂದಿನ ಅಡುಗೆ ಅದುವೆ ಉತ್ತರ ಕರ್ನಾಟಕ ಸ್ಪೆಷಲ್ ಗುದುಗಿನ್​ ಹುಗ್ಗಿ.

ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಖಾರ ಇಷ್ಟಪಡುವವರು ಇರುತ್ತಾರೆ. ಸಿಹಿ ಅಡುಗೆಯನ್ನು ಇಷ್ಟಪಡುವವರಿಗಾಗಿ ಇಂದಿನ ಅಡುಗೆ ಅದುವೆ ಉತ್ತರ ಕರ್ನಾಟಕ ಸ್ಪೆಷಲ್ ಗುದುಗಿನ ಹುಗ್ಗಿ.

ಗುದುಗಿನ ಹುಗ್ಗಿ ಮಾಡಲು ಬೇಕಾಗುವ ಸಾಮಾಗ್ರಿಗಳು ಜಾಜಿ ಕಾಯಿ, ಏಲಕ್ಕಿ, ಕೊಬ್ಬರಿ, ಗೋಡಂಬಿ, ತುಪ್ಪ, ಗಸಗಸೆ, ಬೆಲ್ಲ, ಗೋಧಿ ಹಿಟ್ಟು, ಚಿರೋಟಿ ರವೆ.

ಗುದುಗಿನ ಹುಗ್ಗಿ ಮಾಡುವ ವಿಧಾನ
ಗೋಧಿ ಹಿಟ್ಟು, ಚಿರೋಟಿ ರವೆ ಹಾಕಿ ಸಣ್ಣ ಸಣ್ಣ ಕಡ್ಡಿ ತರನಾಗಿ ಮಾಡಿಕೊಳ್ಳಿ. ಬಳಿಕ ಒಂದು ಪಾತ್ರೆಗೆ ನೀರು ಹಾಕಿ ಅದು ಕಾದ ಮೇಲೆ ಗೋಧಿ ಹಿಟ್ಟಿನ ಕಡ್ಡಿ ಹಾಕಿ, ನಂತರ ತುಪ್ಪ, ಬೆಲ್ಲ, ಏಲಕ್ಕಿ ಪುಡಿ, ಗಸಗಸೆ, ಹುರಿದ ಗೋಡಂಬಿ, ಒಣ ಕೊಬ್ಬರಿ ಹಾಕಿ ಬೇಯಿಸಿಕೊಳ್ಳಿ. ಈಗ ರುಚಿಕರವಾದ ಗುದುಗಿನ ಹುಗ್ಗಿ ಸವಿಯಲು ಸಿದ್ಧ.

ಇದನ್ನೂ ಓದಿ:

ಮಲೆನಾಡಿನ ಸ್ಪೆಷಲ್ ಬಾದಾಮಿ ಪಾಯಸ; ಇಂದೇ ಮಾಡಿ ಸವಿಯಿರಿ

ಮಾವಿನ ಹಣ್ಣಿನ ಕೇಸರಿ ಬಾತ್; 20 ನಿಮಿಷಗಳಲ್ಲಿ ಸರಳ ವಿಧಾನದ ಮೂಲಕ ತಯಾರಿಸಿ