Ganesh Chaturthi 2021 Recipe: ಗಣೇಶ ಹಬ್ಬಕ್ಕೆ ಹಾಸನ ಸ್ಟೈಲ್​ ಮೋದಕ ಮಾಡಿ ರುಚಿ ಸವಿಯಿರಿ

Edited By:

Updated on: Sep 09, 2021 | 9:03 AM

ಗಣಪನಿಗೆ ಇಷ್ಟವಾಗುವ ನಾನಾ ತಿಂಡಿಗಳಲ್ಲಿ ಮೋದಕ ಅತ್ಯಂತ ಪ್ರಿಯಾವಾದ ತಿನಿಸು. ಹಾಗಾಗಿ ಗಣೇಶ ಹಬ್ಬದ ದಿನ ಪ್ರತಿಯೊಬ್ಬರ ಮನೆಯಲ್ಲಿಯೂ ಮೋದಕ ಮಾಡುವ ಪದ್ಧತಿ ಮೊದಲಿನಿಂದಲೂ ಬಂದಿದೆ.

ಹಬ್ಬ ಬಂತೆಂದರೆ ಮನೆಯಲ್ಲಿ ಸಡಗರ ಸಂಭ್ರಮ. ಆಚರಣೆಯಲ್ಲಿರುವ ಸಂಪ್ರದಾಯದೊಂದಿಗೆ ಪೂಜೆ ನೆರವೇರಿಸುತ್ತ ಸಂಭ್ರಮದಿಂದ ಹಬ್ಬವನ್ನು ಆಚರಿಸುವ ಪದ್ಧತಿ ಭಾರತದಲ್ಲಿದೆ. ವಿವಿಧ ಹಬ್ಬಕ್ಕೆ ನಾನಾ ರೀತಿಯ ತಿಂಡಿ ತಿನಿಸುಗಳನ್ನು ಮಾಡಲಾಗುತ್ತದೆ. ದೇವರಿಗೆ ಇಷ್ಟವಾಗುವ ತಿನಿಸುಗಳನ್ನು ಮಾಡಿ ನೈವೇದ್ಯದ ರೂಪದಲ್ಲಿ ನೀಡಲಾಗುತ್ತದೆ. ಅದರಲ್ಲಿ ವಿಶೇಷವಾಗಿ ಗಣಪತಿಗೆ ಇಷ್ಟವಾಗುವ ಮೋದಕವೂ ಒಂದು. ಗಣೇಶ ಹಬ್ಬ ನಾಳೆಯೇ ಇದೆ. ಗಣಪನಿಗೆ ಇಷ್ಟವಾಗುವ ನಾನಾ ತಿಂಡಿಗಳಲ್ಲಿ ಮೋದಕ ಅತ್ಯಂತ ಪ್ರಿಯಾವಾದ ತಿನಿಸು. ಹಾಗಾಗಿ ಗಣೇಶ ಹಬ್ಬದ ದಿನ ಪ್ರತಿಯೊಬ್ಬರ ಮನೆಯಲ್ಲಿಯೂ ಮೋದಕ ಮಾಡುವ ಪದ್ಧತಿ ಮೊದಲಿನಿಂದಲೂ ಬಂದಿದೆ.

ಉತ್ತರ ಕರ್ನಾಟಕದಲ್ಲಿ ಒಂದು ರೀತಿಯ ಮೋದಕದ ಸ್ಟೈಲ್ ಬೇರೆ ಇದ್ದರೆ, ಹಾಸನದಲ್ಲಿ ಮೋದಕ ತಯಾರಿಸುವ ವಿಧಾನ ಬೇರೆ. ಒಂದು ರೀತಿಯ ಸ್ಟೈಲ್ ಒಂದೊಂದು ಬಗೆಯ ರುಚಿಯನ್ನು ನೀಡುತ್ತದೆ. ಹಾಗಾಗಿ ಹಾಸನ ಸ್ಟೈಲ್​ನಲ್ಲಿ ಸ್ಪೆಷಲ್​ ಮೋದಕ ತಯಾರಿಸುವುದು ಹೇಗೆ ಎಂಬುದನ್ನು ಪದ್ಮಾ ಶರ್ಮಾ ಅವರು ವಿವರಿಸಿದ್ದಾರೆ. ನೀವೂ ಸಹ ಹಾಸನ ಸ್ಟೈಲ್​ ಮೋದಕ ಮಾಡಿ ಗಣಪನಿಗೆ ನೈವೇದ್ಯಕ್ಕೆ ಅರ್ಪಿಸಿ ನೀವೂ ಸವಿಯಬಹುದು. ಮಾಡುವ ವಿಧಾನವನ್ನು ವಿಡಿಯೋದಲ್ಲಿ ತಿಳಿದು ಒಮ್ಮೆ ಮನೆಯಲ್ಲಿ ಮೋದಕ ತಯಾರಿಸಿ ರುಚಿ ಸವಿಯಿರಿ.

ಇದನ್ನೂ ಓದಿ:

Ganesh Chaturthi 2021 Recipe: ಗಣೇಶನ ಹಬ್ಬಕ್ಕೆ ಉತ್ತರ ಕರ್ನಾಟಕ ಸ್ಪೆಷಲ್​​ ಮೋದಕ ಮಾಡಿ ಸವಿಯಿರಿ

ಡ್ರೈ ಫ್ರೂಟ್ಸ್ ಉಂಡೆ; ರುಚಿಕರವಾದ ತಿಂಡಿ ಮಾಡಿ ಸವಿಯಿರಿ