ಕೂರ್ಗ್ ಪೋರ್ಕ್ ಕರಿ; ಕೈಲುಮೂಹರ್ತ ಹಬ್ಬದ ಸ್ಪೆಷಲ್
ಚಳಿಗೆ ಖಾರವಾಗಿ ಎನಾದರು ಬೇಕು ಎಂದಾಗ ಈ ಭಾಗದ ಜನರು ಮೊದಲು ಮಾಡುವ ಅಡುಗೆಯಲ್ಲಿ ಹಂದಿ ಪದಾರ್ಥ ಹೆಚ್ಚು ಜನಪ್ರೀಯ. ಅನೇಕ ವಿಧಗಳಲ್ಲಿ ಫೋರ್ಕ್ ಅಡುಗೆ ತಯಾರಿಸಲಾಗುತ್ತದೆ.
ಕೊಡಗಿನಲ್ಲಿ ಸಾಮಾನ್ಯವಾಗಿ ಮಳೆಗಾಲ ಬಂತು ಎಂದರೆ ಹಂದಿ ಮಾಂಸ ಸವಿಯಲು ಜನರು ಸಿದ್ಧ ಎಂದರ್ಥ. ಚಳಿಗೆ ಖಾರವಾಗಿ ಎನಾದರು ಬೇಕು ಎಂದಾಗ ಈ ಭಾಗದ ಜನರು ಮೊದಲು ಮಾಡುವ ಅಡುಗೆಯಲ್ಲಿ ಹಂದಿ ಪದಾರ್ಥ ಹೆಚ್ಚು ಜನಪ್ರೀಯ. ಅನೇಕ ವಿಧಗಳಲ್ಲಿ ಫೋರ್ಕ್ ಅಡುಗೆ ತಯಾರಿಸಲಾಗುತ್ತದೆ. ಅದರಲ್ಲಿ ಕೂರ್ಗ್ ಪೋರ್ಕ್ ಕರಿ ಕೂಡ ಒಂದು. ರೊಟ್ಟಿ ಜತೆ, ಕಡುಬಿನ ಜತೆ ಇದು ಸವಿಯಲು ಚೆನ್ನಾಗಿರುತ್ತದೆ. ಹಾಗಿದ್ದರೆ ಕೂರ್ಗ್ ಪೋರ್ಕ್ ಕರಿ ಮಾಡುವುದು ಹೇಗೆ ಎಂದು ಒಂದು ತಿಳಿದುಕೊಳ್ಳೋಣ.
ಕೂರ್ಗ್ ಫೋರ್ಕ್ ಕರಿ ಮಾಡಲು ಬೇಕಾಗುವ ಸಾಮಾಗ್ರಿಗಳು ಫೋರ್ಕ್, ಉಪ್ಪು, ಅರಿಶಿಣ, ಖಾರದ ಪುಡಿ, ಈರುಳ್ಳಿ, ಗಾಂಧಾರಿ ಮೆಣಸು, ಶುಂಠಿ, ಕರಿ ಬೇವು, ಬೆಳ್ಳುಳ್ಳಿ, ಜೀರಿಗೆ.
ಕೂರ್ಗ್ ಪೋರ್ಕ್ ಕರಿ ಮಾಡುವ ವಿಧಾನ
ಫೋರ್ಕ್ಗೆ ಉಪ್ಪು, ಅರಿಶಿಣ, ಖಾರದ ಪುಡಿ, ಹುಳಿ ನೀರು ಹಾಕಿ ಚೆನ್ನಾಗಿ ಕಲಸಿ ಅರ್ಧ ಗಂಟೆ ಇಡಿ. ಮೊದಲು ಮಣ್ಣಿನ ಮಡಿಕೆಗೆ ಫೋರ್ಕ್ ಮಾಂಸ ಹಾಕಿ ಬೇಯಿಸಿ. ಇದಕ್ಕೆ ಈರುಳ್ಳಿ, ಗಾಂಧಾರಿ ಮೆಣಸು, ಶುಂಠಿ, ಕರಿ ಬೇವು, ಬೆಳ್ಳುಳ್ಳಿ, ಜೀರಿಗೆ ಹಾಕಿ ರುಬ್ಬಿದ ಮಿಶ್ರಣ ಸೇರಿಸಿ. ಬಳಿಕ ಫೋರ್ಕ್ ಮಸಾಲಾ, ಪುಳಿ ನೀರು ಹಾಕಿದರೆ ಕೂರ್ಗ್ ಪೋರ್ಕ್ ಕರಿ ಸವಿಯಲು ಸಿದ್ದ.
ಇದನ್ನೂ ಓದಿ:
ದೇಹಕ್ಕೆ ತಂಪು ನೀಡುವ ಹೆಸರು ಬೇಳೆ ದೋಸೆ ಮಾಡಿ ಸವಿಯಿರಿ; ಮಾಡುವ ವಿಧಾನ ಇಲ್ಲಿದೆ ನೋಡಿ
ಮನೆಯಲ್ಲೇ ಕೋಲಾರ ಸ್ಟೈಲ್ ಚಿಕನ್ ಧಮ್ ಬಿರಿಯಾನಿ ಮಾಡಿ ಸವಿಯಿರಿ