ಉತ್ತರ ಕರ್ನಾಟಕ ಸ್ಪೆಷಲ್ ಅರಳು ಹಿಟ್ಟಿನ ಉಂಡೆ ಹೇಗೆ ಮಾಡ್ತಾರೆ ಗೊತ್ತಾ? ವಿಧಾನ ಇಲ್ಲಿದೆ
ಬೇರೆ ಹಬ್ಬಗಳಲ್ಲೂ ಈ ತಿಂಡಿಯನ್ನು ಸಿದ್ಧಪಡಿಸಿ, ದೇವರಿಗೆ ನೈವೇದ್ಯ ಮಾಡುತ್ತಾರೆ. ಅರಳು ಹಿಟ್ಟಿನ ಉಂಡೆಯನ್ನು ಒಂದೊಂದು ಕಡೆಗಳಲ್ಲಿ ಒಂದೊಂದು ವಿಧಾನದಲ್ಲಿ ತಯಾರಿಸುತ್ತಾರೆ.
ಅರಳು ಹಿಟ್ಟಿನ ಉಂಡೆ ಒಂದು ಬಗೆಯ ಸಿಹಿ ತಿಂಡಿ. ಈ ಸಿಹಿ ತಿಂಡಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮಕ್ಕಳಿಗೆ ಈ ಅರಳು ಹಿಟ್ಟಿನ ಉಂಡೆ ಅಂದರೆ ಪಂಚಪ್ರಾಣ. ಈ ತಿಂಡಿಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ನಾಗರಪಂಚಮಿ ಹಬ್ಬದಂದು ಹೆಚ್ಚಾಗಿ ಮಾಡುತ್ತಾರೆ. ಬೇರೆ ಹಬ್ಬಗಳಲ್ಲೂ ಈ ತಿಂಡಿಯನ್ನು ಸಿದ್ಧಪಡಿಸಿ, ದೇವರಿಗೆ ನೈವೇದ್ಯ ಮಾಡುತ್ತಾರೆ. ಅರಳು ಹಿಟ್ಟಿನ ಉಂಡೆಯನ್ನು ಒಂದೊಂದು ಕಡೆಗಳಲ್ಲಿ ಒಂದೊಂದು ವಿಧಾನದಲ್ಲಿ ತಯಾರಿಸುತ್ತಾರೆ. ಸದ್ಯ ನಾವು ಗದಗದಲ್ಲಿ ಅರಳು ಹಿಟ್ಟಿನ ಉಂಡೆಯನ್ನು ಹೇಗೆ ಮಾಡುತ್ತಾರೆ, ಉಂಡೆ ಮಾಡಲು ಬೇಕಾಗುವ ಸಾಮಾಗ್ರಿಗಳೇನು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.
ಅರಳು ಹಿಟ್ಟಿನ ಉಂಡೆ ಮಾಡಲು ಬೇಕಾಗುವ ಸಾಮಾಗ್ರಿಗಳು
ಬೆಲ್ಲ
ಹುರಿದ ಗೋಧಿ ಹಿಟ್ಟು
ತುಪ್ಪ
ನೀರು
ಇನ್ನು ಉತ್ತರ ಕರ್ನಾಟಕ ಸ್ಪೆಷಲ್ ಅರಳು ಹಿಟ್ಟಿನ ಉಂಡೆ ಮಾಡುವ ವಿಧಾನವನ್ನು ವಿಡಿಯೋದಲ್ಲಿ ತಿಳಿಸಲಾಗಿದೆ.