ಬಿಕ್ಕಿ ಬಿಕ್ಕಿ ಅಳುತ್ತಿದ್ದ ನವೀನ್ ಅಣ್ಣ ಹರ್ಷನನ್ನು ತಂದೆ ತಾಯಿಗಳೇ ಸಂತೈಸಿದರು!
ಹರ್ಷನ ಎಡಕ್ಕೆ ಕೂತಿರುವ ಅವರ ತಂದೆಯೂ ಸಂತೈಸುತ್ತಿದ್ದಾರೆ. ಒಬ್ಬ ತಂದೆ ಬೆಳೆದ ಮನನ ಹೆಗಲ ಮೇಲೆ ಕೈ ಹಾಕಿ ಸಂತೈಸುವ ದೃಶ್ಯ ಅಪರೂಪ. ಯಾಕೆಂದರೆ ಇಂಥ ಸಂದರ್ಭಗಳಲ್ಲಿ ಅದು ಉಲ್ಟಾ ಆಗಿರುತ್ತದೆ. ಅಂದರೆ, ಮಗ ತಂದೆಯನ್ನು ಹಾಗೆ ಸಂತೈಸುತ್ತಾನೆ.
ನವೀನ್ ಶೇಖರಪ್ಪ ಗ್ಯಾನಗೌಡರ್ (Naveen Shekharappa Gyanagoudar) ಅವರ ದೇಹ ಮೂರುವಾರಗಳವರೆಗೆ ಉಕ್ರೇನಲ್ಲೇ ಉಳಿದುಬಿಟ್ಟಾಗ ಅವರ ಮುಖವನ್ನು ಪುನಃ ನೋಡಲಾಗುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದ ಶೇಖರಪ್ಪ (Shekharappa) ಅವರ ಕುಟುಂಬಕ್ಕೆ ಕೊನೆಗೂ ಪಾರ್ಥೀವ ಶರೀರ (mortal remains) ಮನೆಗೆ ಬಂತಲ್ಲ ಅಂತ ಸಮಾಧಾನ ಒಂದೆಡೆಯಾದರೆ, ತಾವು ಹೊತ್ತು ಹೆತ್ತು ಬೆಳೆಸಿದ ಮಗ ಮತ್ತು ಒಡಹುಟ್ಟಿದ ತಮ್ಮನನ್ನು ಈ ಸ್ಥಿತಿಯಲ್ಲಿ ನೋಡುತ್ತಿದ್ದ ತಂದೆ ಶೇಖರಪ್ಪ, ತಾಯಿ ವಿಜಯಲಕ್ಷ್ಮಿ ಮತ್ತು ಅಣ್ಣ ಹರ್ಷನಿಗೆ ದುಃಖ ಸಹಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಹಿರಿಯರಾದ ತಂದೆತಾಯಿಗಳು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವ ಪ್ರಯತ್ನದಲ್ಲಿದ್ದರು ಅದರೆ ಯುವಕ ಮತ್ತು ತನಗಿಂತ ಎರಡು ವರ್ಷ ಚಿಕ್ಕವನಾಗಿದ್ದ ತಮ್ಮನನ್ನು ಕಳೆದುಕೊಂಡಿರುವ ಹರ್ಷನಿಗೆ ದುಃಖ ನಿಯಂತ್ರಿಸುವುದು ಸಾಧ್ಯವಾಗಲಿಲ್ಲ.
ಹರ್ಷ ಚಿಕ್ಕ ಮಗುವಿನ ಹಾಗೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ತಾಯಿ ವಿಜಯಲಕ್ಷ್ಮಿ ಅವರು ಮಗನನ್ನು ಸಂತೈಸುವ ಪ್ರಯತ್ನ ಮಾಡುತ್ತಿದ್ದಾರೆ. ಚಿಕ್ಕ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಸಂತೈಸುವ ಹಾಗೆ ಅವರು ತಮ್ಮ ಮಗನನ್ನು ತಲೆ ನೇವರಿಸುತ್ತಾ ಸಮಾಧಾನಪಡಿಸುತ್ತಿದ್ದಾರೆ.
ಹರ್ಷನ ಎಡಕ್ಕೆ ಕೂತಿರುವ ಅವರ ತಂದೆಯೂ ಸಂತೈಸುತ್ತಿದ್ದಾರೆ. ಒಬ್ಬ ತಂದೆ ಬೆಳೆದ ಮನನ ಹೆಗಲ ಮೇಲೆ ಕೈ ಹಾಕಿ ಸಂತೈಸುವ ದೃಶ್ಯ ಅಪರೂಪ. ಯಾಕೆಂದರೆ ಇಂಥ ಸಂದರ್ಭಗಳಲ್ಲಿ ಅದು ಉಲ್ಟಾ ಆಗಿರುತ್ತದೆ. ಅಂದರೆ, ಮಗ ತಂದೆಯನ್ನು ಹಾಗೆ ಸಂತೈಸುತ್ತಾನೆ.
ನವೀನ್ ರನ್ನು ಕಳೆದುಕೊಂಡು ಅತೀವ ದುಃಖದಲ್ಲಿರುವ ಈ ಕುಟುಂಬಕ್ಕೆ ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ.
ಇದನ್ನೂ ಓದಿ: ನವೀನ್ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ದುಃಖ ಭರಿಸುವ ಶಕ್ತಿಯನ್ನು ದೇವರು ಕುಟುಂಬಕ್ಕೆ ನೀಡಲಿ: ಬಿ ಎಸ್ ಯಡಿಯೂರಪ್ಪ