ಹುಬ್ಬಳ್ಳಿ ಅಂಜಲಿ ಕೊಲೆಗಾರ ರೈಲಿನಲ್ಲೂ ಚಾಕು ಹಾಕಿದ: ಹಂತಕನ ನೈಜ ಘಟನೆ ಬಿಚ್ಚಿಟ್ಟ ಮಹಿಳೆ
ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಇಡೀ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಹತ್ಯೆ ಮಾಡಿದ ಆರೋಪಿಯನ್ನು ದಾವಣಗೆರೆಯಲ್ಲಿ ಸೆರೆ ಹಿಡಿಯಲಾಗಿದೆ. ಬಂಧನಕ್ಕೂ ಮುಂಚೆ ಆರೋಪಿಯಿಂದ ರೈಲಿನಲ್ಲಿ ಮತ್ತೊಬ್ಬ ಮಹಿಳೆಗೆ ಚಾಕು ಇರಿದಿರುವಂತಹ ಘಟನೆ ನಡೆದಿದೆ. ಗಾಯಗೊಂಡ ಮಹಿಳೆ ನೈಜ ಘಟನೆ ಬಿಚ್ಚಿಟ್ಟಿದ್ದಾರೆ. ಬಾತ್ರೂಂಗೆ ಹೋದಾಗ ಬಾಗಿಲು ಓಪನ್ ಮಾಡಿದಾಗ ಸಡನ್ ಆಗಿ ಒಳಗೆ ನುಗ್ಗಿ ಚಾಕು ಹೊಟ್ಟೆಗೆ ಚುಚ್ಚೋಕೆ ಬಂದ ಎಂದಿದ್ದಾರೆ.
ದಾವಣಗೆರೆ, ಮೇ 17: ಪ್ರೀತಿಸಿದ ಯುವತಿಯನ್ನೇ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ನನ್ನು ದಾವಣಗೆರೆಯ (Davanagere) ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ಆರೋಪಿಯಿಂದ ರೈಲಿನಲ್ಲಿ ಮತ್ತೊಬ್ಬ ಮಹಿಳೆಗೆ ಚಾಕು ಇರಿದಿದ್ದಾನೆ. ಈ ಕುರಿತಾಗಿ ಗಾಯಗೊಂಡ ಮಹಿಳೆ ನೈಜ ಘಟನೆ ಬಿಚ್ಚಿಟ್ಟಿದ್ದಾರೆ. ಬಾತ್ರೂಂಗೆ ಹೋದಾಗ ಸಡನ್ ಆಗಿ ಬಂದ ಯಾವನೋ ಅಂತ ಬೈದೆ. ಬಾಗಿಲು ಓಪನ್ ಮಾಡಿದಾಗ ಸಡನ್ ಆಗಿ ಒಳಗೆ ನುಗ್ಗಿ ಚಾಕು ಹೊಟ್ಟೆಗೆ ಚುಚ್ಚೋಕೆ ಬಂದ, ಸೈಡ್ಗೆ ಬಂದಿದ್ದಕ್ಕೆ ಕೈಗೆ ಚುಚ್ಚಿತು. ನಂಗೆ ಚಾಕು ಹಾಕಿದ ಮೇಲೆ ನಾನು ಕೂಗಿದೆ. ಆಗ ನನ್ನ ಗಂಡ ಬಂದರು. ಅವನ್ನು ಹಿಡಿಯುವುದಕ್ಕೆ ಪ್ರತ್ನಿಸಿದೇವೆ. ಆದರೆ ಆತ ರೈಲಿಂದ ಹೊರಗೆ ಹಾರಿ ಹೋದ ಸಿಗಲಿಲ್ಲ. ನನ್ನ ಕೈಗೆ ಗಾಯವಾಗಿದ್ದರಿಂದ ರಕ್ತ ಬಹಳ ಹೋಗುತ್ತಿತ್ತು. ನನ್ನು ಗಂಡ ಬಟ್ಟೆ ಕಟ್ಟಿದರು ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us