ಮೂರು ತಿಂಗಳ ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ ಎಂದ ಗೃಹಲಕ್ಷ್ಮೀಯರು

Edited By:

Updated on: Nov 05, 2026 | 12:50 PM

ಮುಖ್ಯಾಂಶಗಳು

  • ಮೂರು ತಿಂಗಳ ಗೃಹಲಕ್ಷ್ಮೀ ಹಣ ಹಾಕುತ್ತಿರುವ ವಿಚಾರ
  • ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿರುವ ಫಲಾನುಭವಿಗಳು
  • ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡ್ತೇವೆ ಎಂದ ಮಹಿಳೆಯರು

ಗೃಹಲಕ್ಷ್ಮಿ ಯೋಜನೆಯಡಿ 6000 ರೂ ಜಮೆ ಆಗದಿರುವುದು ಹುಬ್ಬಳ್ಳಿ ಮಹಿಳೆಯರಲ್ಲಿ ಅಸಮಾಧಾನ ಮೂಡಿಸಿದೆ. ಮೂರರಿಂದ ಐದು ತಿಂಗಳ ಹಣ ಬಾಕಿಯಿದ್ದು, ಹಬ್ಬದ ಮುಂಚೆ ಹಣ ಬಂದರೆ ಅನುಕೂಲವಾಗುತ್ತದೆ ಎಂದು ಫಲಾನುಭವಿಗಳು ಆಶಿಸಿದ್ದಾರೆ. ಆದಾಗ್ಯೂ, ಕೆಲವರು ಹೆಚ್ಚಿದ ಬಸ್ ದರಗಳಿಂದ ಯೋಜನೆಯ ಪ್ರಯೋಜನ ಸೀಮಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹುಬ್ಬಳ್ಳಿ, ನವೆಂಬರ್​​ 05: ಗೃಹಲಕ್ಷ್ಮೀ ಯೋಜನೆಯ 3 ಕಂತುಗಳ ಹಣ ಬಿಡುಗಡೆಗೆ ಸರ್ಕಾರ ಆದೇಶಿಸಿದೆ. ಆದರೆ ಈ ಬಗ್ಗೆ ಗೃಹಲಕ್ಷ್ಮೀಯರು ಪ್ರತಿಕ್ರಿಯಿಸಿದ್ದಾರೆ. ‘ಹಣ ಹಾಕುತ್ತೇವೆ ಅಂತ ಹೇಳಿದರೆ ಸಾಲದು ಹಾಕಬೇಕು. ಮೂರ್ನಾಲ್ಕು ತಿಂಗಳ ಹಣ ಬಂದಿಲ್ಲ, ಇದೀಗ ಹಾಕುತ್ತೇವೆ ಅಂತ ಹೇಳುತ್ತಿದ್ದಾರೆ, ಆದರೆ ಹಾಕುವುದು ಕಷ್ಟವಿದೆ’ ಎಂದಿದ್ದಾರೆ. ಮತ್ತೆ ಕೆಲ ಮಹಿಳೆಯರು ಪ್ರತಿಕ್ರಿಯಿಸಿದ್ದು, ‘ಮೂರು ತಿಂಗಳ ಹಣ ಒಟ್ಟಿಗೆ ಹಾಕಿದರೆ ಪುಣ್ಯ ಬರುತ್ತೆ. ಹಣ ಹಾಕಿದರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More