Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಹುಬ್ಬಳ್ಳಿ ಚನ್ನಮ್ಮ ಸರ್ಕಲ್​ನಲ್ಲಿ ರಾತ್ರಿಯಿಡೀ ಸಂಭ್ರಮ

ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಹುಬ್ಬಳ್ಳಿ ಚನ್ನಮ್ಮ ಸರ್ಕಲ್​ನಲ್ಲಿ ರಾತ್ರಿಯಿಡೀ ಸಂಭ್ರಮ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 10, 2025 | 11:17 AM

ಭಾರತ ಗೆದ್ದಾಗ ಸಂಭ್ರಮಿಸಲು ವಯಸ್ಸಿನ ಮಿತಿ ಇಲ್ಲ ಮಾರಾಯ್ರೇ. ಇಲ್ನೋಡಿ, ಮಕ್ಕಳು, ಯುವಕರು, ಮಧ್ಯವಯಸ್ಕರು ಮತ್ತು ವಯಸ್ಸಾದವರು ಸಹ ಕುಣಿಯುತ್ತ ಖುಷಿಪಡುತ್ತಿದ್ದಾರೆ. ಒಬ್ಬ ಬಾಲಕ ತಾಳಕ್ಕೆ ತಕ್ಕಂತೆ ತಮ್ಮಟೆ ಬಾರಿಸುತ್ತಿದ್ದರೆ ಮತ್ತೊಬ್ಬ ಯುವಕನಿಗೆ ತಾನು ಬಾರಿಸಿದ್ದೇ ತಾಳ! ಅದನ್ನೇ ನಾವು ಹೇಳಿದ್ದು, ಸಡಗರದಲ್ಲಿರುವಾಗ ಉಳಿದ ಸಂಗತಿಗಳ್ಯಾವೂ ಲೆಕ್ಕಕ್ಕೆ ಬರಲ್ಲ.

ಹುಬ್ಬಳ್ಳಿ, ಮಾರ್ಚ್ 10: ಗೆಲುವು ತರುವ ಸಂಭ್ರಮವೇ ಹೀಗೆ, ಕುಣಿದು ಕುಪ್ಪಳಿಸುವುದು, ಕೇಕೆ, ಶಿಳ್ಳೆ, ಚಪ್ಪಾಳೆ ಮತ್ತು ಎಣೆಯಿಲ್ಲದ ನಗು. ನಿನ್ನೆ ರಾತ್ರಿ ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy) ಮೇಲೆ ಅಧಿಪತ್ಯ ಸಾಧಿಸಿದಾಗ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಕಂಡ ದೃಶ್ಯವಿದು. ಕಳೆದ ವರ್ಷ ಟೀಂ ಇಂಡಿಯಾ ಟಿ20ಐ ವಿಶ್ವಕಪ್ ಗೆದ್ದಾಗಲೂ ಈ ಸರ್ಕಲ್​ನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ICC Champions Trophy 2025: ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಎಲ್ಲೆಡೆ ಸಂಭ್ರಮ

Published on: Mar 10, 2025 10:43 AM