ಹೆಂಡತಿಯ ಕಿರುಕುಳ ತಾಳಲಾರದೆ ಅಳುತ್ತಾ ಪೊಲೀಸ್ ಕಮೀಶನರ್ ಬಳಿ ಓಡಿಬಂದ ಹುಬ್ಬಳ್ಳಿಯ ಯುವಕ

Updated on: May 20, 2025 | 7:25 PM

ಸಾದಿಖ್ ನಂಥ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಪತ್ನಿಯ ಕಾಟ ತಾಳಲಾರದೆ ಸಾವಿಗೆ ಶರಣಾದ ಜನರ ಬಗ್ಗೆಯೂ ನಾವು ವರದಿ ಮಾಡಿದ್ದೇವೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಕೊಲೆ ಆರೋಪದಲ್ಲಿ ಪತ್ನಿ ಪಲ್ಲವಿ ಬಂಧನಕ್ಕೊಳಗಾಗಿರವುದು ಎಲ್ಲರಿಗೂ ಗೊತ್ತಿದೆ. ಸಾದಿಖ್ ಹೇಳೋದೆಲ್ಲ ಸತ್ಯ ಅಂತಲೂ ನಮ್ಮ ವಾದವಲ್ಲ, ಪೊಲೀಸರು ತನಿಖೆ ನಡೆಸಿ ನಿಜಾಂಶ ಬಯಲು ಮಾಡಬೇಕು.

ಹುಬ್ಬಳ್ಳಿ, ಮೇ 20: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ ಜೊತೆ ಕಣ್ಣೀರಲ್ಲಿ ನೀರು ಹಾಕುತ್ತಾ ಮಾತಾಡುತ್ತಿರುವ ಇವರ ಹೆಸರು ಮೊಹಮ್ಮದ್ ಸಾದಿಖ್ (Mohammad Sadiq). ಹುಬ್ಬಳ್ಳಿಯ ಈಶ್ವರ್ ನಗರನಲ್ಲಿ ವಾಸವಾಗಿದ್ದಾರೆ. ಇವರ ಸಮಸ್ಯೆಯೇನೆಂದರೆ 5 ವರ್ಷದ ಹಿಂದೆ ಮದುವೆಯಾಗಿರುವ ಪತ್ನಿ ತನ್ನ ಅಣ್ಣಂದಿರು ಮತ್ತು ತಂದೆ ತಾಯಿ ಜೊತೆ ಸೇರಿ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರಂತೆ. ಹುಬ್ಬಳ್ಳಿಯ ಶೋ ರೂಮೊಂದರಲ್ಲಿ ಕೆಲಸ ಮಾಡುವ ಸಾದಿಖ್, ಪತ್ನಿ ಮತ್ತು ಆಕೆಯ ಮನೆಯವರ ಟಾರ್ಚರ್ ತಾಳಲಾರದೆ ಅವರ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಾರೆ. ಸಾದಿಖ್ ಹೇಳಿದ್ದನ್ನು ಕೇಳಿಸಿಕೊಂಡ ಶಶಿಕುಮಾರ್ ದೂರು ದಾಖಲಿಸುವಂತೆ ಹೇಳಿದ್ದಾರೆ.

ಇದನ್ನೂ ಓದಿ:  ಫೈನಾನ್ಸ್ ಕಿರುಕುಳದಿಂದ ಸಾವಿಗೆ ಶರಣಾದ ವ್ಯಕ್ತಿಯ ತಾಯಿಯನ್ನು ಭೇಟಿಯಾದ ಪೊಲೀಸ್ ಕಮೀಶನರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ