ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಕುಸಿತ ಕಂಡಿದೆ: ಸುಧಾಮೂರ್ತಿ ವಿಷಾದ
ಹುಬ್ಬಳ್ಳಿಯಲ್ಲಿ ಶತಮಾನದ ಶಾಲೆಯಾಗಿರೋ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದಿದ್ದ ಸುಧಾ ಮೂರ್ತಿಯವರು, ನಾನು ಇದೇ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ 6 ವರ್ಷ ವಿದ್ಯಾಭ್ಯಾಸ ಮಾಡಿದ್ದೇನೆ. ನಾನು ಈ ಶಾಲೆಯಲ್ಲಿ ಓದುವಾಗ ಕನ್ನಡ ಮಾಧ್ಯಮದಲ್ಲಿ 1400 ರಷ್ಟು ವಿದ್ಯಾರ್ಥಿಗಳಿದ್ದರು. ಆದರೀಗ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳ ಸಂಖ್ಯೆ ಭಾರೀ ಇಳಿತ ಕಂಡಿದೆ. ಹೀಗಾಗಿ ಈ ಶಾಲೆಯನ್ನು ಆಂಗ್ಲ ಮಾಧ್ಯಮವನ್ನಾಗಿಸಬೇಕಾಯಿತು ಎಂದಿದ್ದಾರೆ.
ಹುಬ್ಬಳ್ಳಿ, ಅಕ್ಟೋಬರ್ 28: ಹುಬ್ಬಳ್ಳಿಯಲ್ಲಿ ಶತಮಾನದ ಶಾಲೆಯಾಗಿರೋ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದಿದ್ದ ಸುಧಾ ಮೂರ್ತಿಯವರು, ನಾನು ಇದೇ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ 6 ವರ್ಷ ವಿದ್ಯಾಭ್ಯಾಸ ಮಾಡಿದ್ದೇನೆ. ನಾನು ಕಲಿತ ಶಾಲೆಯ ಶಿಥಿಲಾವಸ್ಥೆಯನ್ನು ನೋಡಲು ಸಾಧ್ಯವಾಗದೇ ಇದರ ಅಭಿವೃದ್ಧಿ ಮಾಡಿದ್ದೇನೆ. ನಮ್ಮ ತಾಯಿ, ಅವರ ತಂದೆ ಇಬ್ಬರೂ ಇದೇ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹೀಗಾಗಿ ಈ ಶಾಲೆಗೂ ನನಗೂ ತಲತಲಾಂತರಗಳ ಸಂಬಂಧವಿದೆ ಎಂದರು.
ನಾನು ಈ ಶಾಲೆಯಲ್ಲಿ ಓದುವಾಗ ಕನ್ನಡ ಮಾಧ್ಯಮದಲ್ಲಿ 1400 ರಷ್ಟು ವಿದ್ಯಾರ್ಥಿಗಳಿದ್ದರು. ಆದರೀಗ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳ ಸಂಖ್ಯೆ ಭಾರೀ ಇಳಿತ ಕಂಡಿದೆ. ಹೀಗಾಗಿ ಈ ಶಾಲೆಯನ್ನು ಆಂಗ್ಲ ಮಾಧ್ಯಮವನ್ನಾಗಿಸಬೇಕಾಯಿತು ಎಂದಿದ್ದಾರೆ. ಜಾತಿ ಗಣತಿ ಸಮಯದಲ್ಲಿ ತಮ್ಮ ಜಾತಿಯ ಬಗ್ಗೆ ಮಾಹಿತಿ ಹಂಚಿಕೊಳ್ಳದೆ ಇರುವ ವಿಚಾರ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ಸುದ್ದಿಗೋಷ್ಠಿಯಲ್ಲಿ ತಾನು ಈ ಶಾಲೆಯ ವಿಷಯ ಬಿಟ್ಟರೆ ಬೇರೆ ಏನನ್ನೂ ಹೇಳಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Oct 28, 2025 01:30 PM
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

