ಡಿ.ಕೆ. ಶಿವಕುಮಾರ್ ಭೇಟಿಯಾದ ತೇಜಸ್ವಿ ಸೂರ್ಯ: ಡಿಸಿಎಂಗೆ ಸಂಸದ ಕೊಟ್ಟ ಸಲಹೆಗಳೇನು?
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿರೋ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ಟ್ರಾಫಿಕ್ , ಗುಂಡಿ ಸಮಸ್ಯೆ ಸೇರಿ ಟನಲ್ ರೋಡ್ನ ಆಗು ಹೋಗುಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಮೆಟ್ರೋ ಸಂಪರ್ಕ ಮತ್ತು ಸಬ್ ಅರ್ಬನ್ ರೈಲು ವಿಚಾರದ ಬಗ್ಗೆಯೂ ಸಂಸದರು ಪ್ರಸ್ತಾಪಿಸಿದ್ದು, ಇದಕ್ಕೆ ಡಿಸಿಎಂರಿಂದಲೂ ಸೂಕ್ತ ಸ್ಪಂದನೆ ಸಿಕ್ಕಿದೆ ಎನ್ನಲಾಗಿದೆ.
ಬೆಂಗಳೂರು, ಅಕ್ಟೋಬರ್ 28: ಉಪ ಮುಖ್ಯಮಂತ್ರಿಗಳ ಜೊತೆಗೆ ಒಂದು ಗಂಟೆಗೂ ಹೆಚ್ಚು ಸಮಯ ಚರ್ಚೆ ಮಾಡಿದ್ದು, ಬೆಂಗಳೂರು ಟ್ರಾಫಿಕ್ , ಗುಂಡಿ ಸಮಸ್ಯೆ ಬಗ್ಗೆ ವಿಸ್ತೃತವಾದ ಮಾತುಕತೆ ನಡೆದಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಡಿಸಿಎಂ ಡಿಕೆಶಿ (D.K. Shivakumar) ಭೇಟಿ ಬಳಿಕ ಮಾತನಾಡಿದ ಅವರು, ವಿಶೇಷವಾಗಿ ಟನಲ್ ರೋಡ್ ಕುರಿತು ಚರ್ಚೆ ಮಾಡಲಾಗಿದ್ದು, ಟ್ರಾಫಿಕ್ ಕಡಿಮೆ ಆಗಬೇಕು ಅಂದ್ರೆ ನಮ್ಮ ರಸ್ತೆಗಳಲ್ಲಿರುವ ವಾಹನಗಳ ಸಂಖ್ಯೆ ಕಡಿಮೆಯಾಗಬೇಕು. ಶೇ.70ರಷ್ಟು ಜನ ಸಾರ್ವಜನಿಕ ಸಾರಿಗೆ ಉಪಯೋಗ ಮಾಡುವಂತೆ ಮಾಡಬೇಕು. 300 ಕಿ.ಮೀ. ಮೆಟ್ರೋ ಕನೆಕ್ಟಿವಿಟಿ ಜೊತೆಗೆ, 3 ನಿಮಿಷಕ್ಕೊಂದು ಮೆಟ್ರೋ ಸಿಗುವಂತೆ ಆಗಬೇಕು. ಜನ ಇರುವ ಜಾಗದಿಂದ 5 ನಿಮಿಷ ನಡೆದುಕೊಂಡು ಹೋದ್ರೆ ಮೆಟ್ರೋ ಸ್ಟೇಷನ್ ಸಿಕ್ಕರೆ ಸಾರ್ವಜನಿಕ ಸಾರಿಗೆಯತ್ತ ಜನರು ಮುಖ ಮಾಡುತ್ತಾರೆ. ಮಾಸ್ಟರ್ ಪ್ಲ್ಯಾನ್ನಲ್ಲಿರುವಂತೆ 300 ಕಿ.ಮೀ. ಸಬ್ ಅರ್ಬನ್ ರೈಲು ಕೂಡ ಬೆಂಗಳೂರಿಗೆ ಅವಶ್ಯಕತೆ ಇದೆ ಎಂದು ತಿಳಿಸಿರೋದಾಗಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

