ಅಮೃತಧಾರೆ ಯೋಜನೆ: ಕಲ್ಯಾಣ ಕರ್ನಾಟಕದ ಮೊದಲ ಎದೆಹಾಲು ಬ್ಯಾಂಕ್ ಬಳ್ಳಾರಿ ವಿಮ್ಸ್​ನಲ್ಲಿ ಸ್ಥಾಪನೆ

ಅರುಣ್​ ಕುಮಾರ್​ ಬೆಳ್ಳಿ

Updated on: Jul 12, 2025 | 11:38 AM

ಬಾಣಂತಿಯರಿಂದ ಎದೆಹಾಲನ್ನು ಸಂಗ್ರಹಿಸುವ ಮೊದಲು ಅವರನ್ನು ಹೆಚ್​ಐವಿ, ಹೆಪಾಟೈಟಿಸ್ ಮತ್ತು ಇನ್ನಿತರ ವೈದ್ಯಕೀಯ ಟೆಸ್ಟ್​​ಗಳಿಗೆ ಒಳಪಡಿಸಲಾಗುತ್ತದೆ, ಕೇವಲ ಆರೋಗ್ಯವಂತ ಮಹಿಳೆಯರಿಂದ ಮಾತ್ರ ಹಾಲನ್ನು ಎಕ್ಸ್​ಟ್ರ್ಯಾಕ್ಟ್ ಮಾಡಲಾಗುತ್ತದೆ, ಶಿಶುಗಳಿಗೆ ಹೆತ್ತಮ್ಮನ ಹಾಲೇ ಬೇಕಾಗುತ್ತದೆ ಅಂತೇನಿಲ್ಲ, ಇದನ್ನು ತಾಯಂದಿರ ಹಾಲು ಅನ್ನೋದಕ್ಕಿಂತ ಎದೆ ಹಾಲು ಅನ್ನುವುದು ಸರಿ, ಸಿದ್ಧತೆಗಳು ಮುಗಿದಿವೆ ಉದ್ಘಾಟನೆಯೊಂದು ಬಾಕಿಯಿದೆ ಎಂದು ವೈದ್ಯರು ಹೇಳುತ್ತಾರೆ.

ಬಳ್ಳಾರಿ, ಜುಲೈ 12: ನವಜಾತ ಶಿಶುಗಳಿಗೆ ತಾಯಂದಿರು ಎದೆಹಾಲು ಕುಡಿಸದಿರುವುದಕ್ಕೆ ಹಲವಾರು ವೈದ್ಯಕೀಯ ಕಾರಣಗಳಿರುತ್ತವೆ, ಆದರೆ ಹಸುಳೆಗಳು ಎದೆಹಾಲಿನಿಂದ ವಂಚಿತರಾಗುಬಾರದು ಎನ್ನುವ ಕಾರಣಕ್ಕೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಬಳ್ಳಾರಿಯ ವಿಮ್ಸ್ ನಲ್ಲಿ ಅಮೃತಧಾರೆ ಯೋಜನೆ ಅಡಿ ಎದೆಹಾಲಿನ ಬ್ಯಾಕೊಂದನ್ನು ಸ್ಥಾಪಿಸಲಾಗಿದೆ. ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ತಯಾರಾಗಿರುವ ಎದೆಹಾಲು ಸಂಸ್ಕಾರಣಾ ಕೇಂದ್ರದಲ್ಲಿ ಅರೋಗ್ಯವಂತ ಬಾಣಂತಿಯರ ಎದೆಹಾಲನ್ನು ನಿರ್ದಿಷ್ಟ ತಾಪಮಾನದಲ್ಲಿ ಕುದಿಸಿ, ಶೈತ್ಯೀಕರಿಸಿದ ನಂತರ ಪಾಶ್ಚರೀಕರಣ ಮಾಡಲಾಗುತ್ತದೆ ಮತ್ತು ಈ ಎಲ್ಲ ಪ್ರಕ್ರಿಯೆಗಳ ನಂತರವೇ ಶಿಶುಗಳಿಗೆ ಹಾಲನ್ನು ಒದಗಿಸಲಾಗುತ್ತದೆ. ಮಿಲ್ಕ್ ಬ್ಯಾಂಕ್ ಬಗ್ಗೆ ಸಮಗ್ರ ಮಾಹಿತಿ ನೀಡಿರುವ ನಮ್ಮ ಬಳ್ಳಾರಿ ಅಲ್ಲಿಯ ವೈದ್ಯರೊಂದಿಗೂ ಮಾತಾಡಿದ್ದಾರೆ.

ಇದನ್ನೂ ಓದಿ:    Breastfeeding: ಮಗುವಿಗೆ 6 ತಿಂಗಳ ನಂತರ ಎದೆಹಾಲು ಕುಡಿಸುವುದನ್ನು ನಿಲ್ಲಿಸಬೇಡಿ; ಇಲ್ಲಿದೆ ಕಾರಣ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.