Mother Milk benefits: ಶಿಶುವಿಗೆ ತಾಯಿಯ ಎದೆಹಾಲು ಸಿಗದಿದ್ದರೆ ಏನೆಲ್ಲಾ ಆಗುತ್ತಾ ಗೊತ್ತಾ?
ಮಗು ಹುಟ್ಟಿದ ಒಂದು ಗಂಟೆಯೊಳಗೆ ಪಡೆಯುವ ಈ ಹಾಲು ಅವರ ಜೀವನದುದ್ದಕ್ಕೂ ಆರೋಗ್ಯವಾಗಿರಲು ಪ್ರಮುಖವಾದದ್ದು. ಅದರಲ್ಲಿಯೂ ಎದೆ ಹಾಲಿನಲ್ಲಿ ಪ್ರತಿಕಾಯಗಳು ಮತ್ತು ಪೋಷಕಾಂಶಗಳಿವೆ, ಅದು ರೋಗಗಳನ್ನು ಪರಿಣಾಮಕಾರಿಯಾಗಿ ಎದುರಿಸುತ್ತದೆ. ಸ್ತನ್ಯಪಾನವು ಕೇವಲ ಮಗುವಿನ ಆರೋಗ್ಯಕ್ಕಾಗಿ ಮಾತ್ರವಲ್ಲ. ಇದು ತಾಯಿಗೂ ತುಂಬಾ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಆದರೆ ಮಗುವಿಗೆ ತಾಯಿಯ ಎದೆಹಾಲು ಸಿಗದಿದ್ದರೆ ಏನಾಗುತ್ತದೆ? ಯಾಕೆ ತಾಯಿಯ ಹಾಲು ಅವಶ್ಯಕ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಎಷ್ಟು ಮುಖ್ಯ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಇದಕ್ಕೆ ಪೂರಕ ಎಂಬಂತೆ ತಾಯಿಯ ಎದೆ ಹಾಲಿನ ಮಹತ್ವವನ್ನು ತಿಳಿಸಲು ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಪ್ರತಿವರ್ಷ ಸ್ತನ್ಯಪಾನ ಸಪ್ತಾಹವನ್ನು ಆಚರಿಸುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲು ಈ ಸಪ್ತಾಹವನ್ನು ಪ್ರತಿವರ್ಷ ಆಚರಣೆ ಮಾಡುತ್ತದೆ. ಮಗುವಿನ ಜನನದ ನಂತರ ತಾಯಿಯ ಎದೆ ಹಾಲು ಮಗುವಿನ ಬೆಳವಣಿಗೆಗೆ ಬಹಳ ಉಪಯುಕ್ತವಾಗಿರುತ್ತದೆ. ಮಗು ಹುಟ್ಟಿದ ಒಂದು ಗಂಟೆಯೊಳಗೆ ಪಡೆಯುವ ಈ ಹಾಲು ಅವರ ಜೀವನದುದ್ದಕ್ಕೂ ಆರೋಗ್ಯವಾಗಿರಲು ಪ್ರಮುಖವಾದದ್ದು. ಅದರಲ್ಲಿಯೂ ಎದೆ ಹಾಲಿನಲ್ಲಿ ಪ್ರತಿಕಾಯಗಳು ಮತ್ತು ಪೋಷಕಾಂಶಗಳಿವೆ, ಅದು ರೋಗಗಳನ್ನು ಪರಿಣಾಮಕಾರಿಯಾಗಿ ಎದುರಿಸುತ್ತದೆ. ಸ್ತನ್ಯಪಾನವು ಕೇವಲ ಮಗುವಿನ ಆರೋಗ್ಯಕ್ಕಾಗಿ ಮಾತ್ರವಲ್ಲ. ಇದು ತಾಯಿಗೂ ತುಂಬಾ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಆದರೆ ಮಗುವಿಗೆ ತಾಯಿಯ ಎದೆಹಾಲು ಸಿಗದಿದ್ದರೆ ಏನಾಗುತ್ತದೆ? ಯಾಕೆ ತಾಯಿಯ ಹಾಲು ಅವಶ್ಯಕ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಮಗುವಿಗೆ ತಾಯಿಯ ಹಾಲು ಸಿಗದಿದ್ದರೆ ಅನೇಕ ರೀತಿಯ ಸಮಸ್ಯೆಗಳು ಆಗುತ್ತವೆ. ತಾಯಿಯ ಹಾಲಿನಲ್ಲಿ ಅಮೃತಕ್ಕಿಂತ ಹೆಚ್ಚಿನ ಶಕ್ತಿ ಇದೆ. ಹಾಗಾಗಿ ನವಜಾತ ಶಿಶುಗಳಿಗೆ ಇದು ಬಹಳ ಮುಖ್ಯವಾಗುತ್ತದೆ. ತಾಯಿಯ ಎದೆ ಹಾಲಿನಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಎದೆ ಹಾಲಿನಲ್ಲಿ ಪ್ರತಿಕಾಯಗಳು, ಕಿಣ್ವಗಳು ಮತ್ತು ಬಿಳಿ ರಕ್ತ ಕಣಗಳು ಸಮೃದ್ಧವಾಗಿವೆ. ಇವು ಮಗುವಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇದು ಕಿವಿ ಸೋಂಕುಗಳು, ಎಸ್ಜಿಮಾ, ಅಲರ್ಜಿಗಳು ಮತ್ತು ಅನಾರೋಗ್ಯಗಳು ಸೇರಿದಂತೆ ವಿವಿಧ ರೀತಿಯ ಸೋಂಕುಗಳ ವಿರುದ್ಧ ರಕ್ಷಣಾತ್ಮಕ ಕವಚವಾಗಿ ಕಾರ್ಯ ನಿರ್ವಹಿಸುತ್ತದೆ. ಎದೆ ಹಾಲು ಸಿಗದಿದ್ದರೆ ರೋಗನಿರೋಧಕ ಶಕ್ತಿ ಕುಂಠಿತವಾಗಿ ಸೋಂಕುಗಳು ಬೇಗ ಬರಬಹುದು.
ಸರಿಯಾದ ಪೋಷಣೆ ಸಿಗುತ್ತದೆ: ನವಜಾತ ಶಿಶುಗಳಿಗೆ ಪ್ರಕೃತಿ ಒದಗಿಸುವ ಪರಿಪೂರ್ಣ ಆಹಾರವೆಂದರೆ ತಾಯಿಯ ಹಾಲು. ಇದು ಮಗುವಿನ ಬೆಳವಣಿಗೆಯ ಅಗತ್ಯಗಳಿಗೆ ಅನುಗುಣವಾಗಿ ಪ್ರೋಟೀನ್ಗಳು, ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು, ಜೀವಸತ್ವಗಳು ಮತ್ತು ಖನಿಜಗಳು ಸೇರಿದಂತೆ ಪೋಷಕಾಂಶಗಳ ಸಮತೋಲನವನ್ನು ಹೊಂದಿರುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಸರಿಯಾದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಸಿಗದಿದ್ದರೆ ಮಕ್ಕಳಿಗೆ ಸರಿಯಾದ ಪೋಷಣೆಯೂ ಸಿಗುವುದಿಲ್ಲ.
ಜೀರ್ಣಶಕ್ತಿ ಚೆನ್ನಾಗಿರುತ್ತದೆ: ತಾಯಿಯ ಹಾಲಿನಲ್ಲಿ ಪ್ರಿಬಯಾಟಿಕ್ ಗಳು ಮತ್ತು ಪ್ರೋಬಯಾಟಿಕ್ ಗಳು ಇರುತ್ತವೆ. ಇವು ಮಗುವಿನ ಜೀರ್ಣಾಂಗ ವ್ಯವಸ್ಥೆಯಲ್ಲಿ ಪ್ರಯೋಜನಕಾರಿಯಾದ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಇದು ಜಠರಗರುಳಿನ ಸಮಸ್ಯೆಗಳನ್ನು ತಡೆಗಟ್ಟಲು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಮಗುವಿಗೆ ಎದೆ ಹಾಲು ಸಿಗದಿದ್ದರೆ ಜೀರ್ಣಶಕ್ತಿ ಕುಂಠಿತವಾಗುತ್ತದೆ.
ದೀರ್ಘಕಾಲದ ರೋಗಗಳನ್ನು ತಡೆಗಟ್ಟುತ್ತದೆ: ಎದೆ ಹಾಲು ಭವಿಷ್ಯದಲ್ಲಿ ಬೊಜ್ಜು, ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಎದೆ ಹಾಲಿನಲ್ಲಿರುವ ಜೈವಿಕ ಸಕ್ರಿಯ ಘಟಕಗಳು ಮಗುವಿನ ಚಯಾಪಚಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸರಿಯಾಗಿಡಲು ಸಹಾಯ ಮಾಡುತ್ತದೆ. ಮಗುವಿಗೆ ದೀರ್ಘಕಾಲದ ರೋಗಗಳನ್ನು ತಡೆಗಟ್ಟಲು ಎದೆಹಾಲು ಬಹಳ ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Sat, 22 February 25




