ಮಹಿಳೆಗೆ ಹಠಾತ್ತನೆ ಕಾಣಿಸಿಕೊಂಡ ಹೆರಿಗೆ ನೋವು, ರಸ್ತೆಯಲ್ಲೇ ಹೆರಿಗೆ ಮಾಡಿಸಿದ ವೈದ್ಯೆ

Updated on: Apr 26, 2026 | 9:08 AM

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗರ್ಭಿಣಿಯೊಬ್ಬರಿಗೆ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸ್ಥಳೀಯರ ಸಹಾಯದಿಂದ ವೈದ್ಯರು ರಸ್ತೆಯಲ್ಲೇ ಹೆರಿಗೆ ಮಾಡಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮಹಿಳೆ ನೋವಿನಿಂದ ನರಳುತ್ತಿದ್ದರು, ಸುತ್ತಮುತ್ತಲಿನ ಪರಿಸ್ಥಿತಿ ಒಂದು ಕ್ಷಣ ಸ್ತಬ್ಧವಾಯಿತು.ಮಹಿಳೆಯರು ಸುತ್ತುವರೆದು ತಮ್ಮ ಸೀರೆ ಹಾಗೂ ದುಪಟ್ಟಾವನ್ನೇ ಪರದೆಯಂತೆ ಹಿಡಿದು ಸಹಾಯ ಮಾಡಿದರು. ಪುರುಷರು ವಾಹನಗಳ ಸಂಚಾರವನ್ನು ತಡೆದು ರಸ್ತೆಯಲ್ಲಿ ದಾರಿ ಮಾಡಿಕೊಟ್ಟರು. ಅಲ್ಲಿ ಯಾರು ಯಾರಿಗೆ ಸಂಬಂಧಿಕರಲ್ಲದಿದ್ದರೂ, ಎಲ್ಲರ ಉದ್ದೇಶ ಆ ತಾಯಿ ಮತ್ತು ಮಗುವನ್ನು ರಕ್ಷಿಸುವುದೊಂದೇ ಆಗಿತ್ತು.

ಪುಣೆ, ಏಪ್ರಿಲ್ 26: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗರ್ಭಿಣಿಯೊಬ್ಬರಿಗೆ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸ್ಥಳೀಯರ ಸಹಾಯದಿಂದ ವೈದ್ಯರು ರಸ್ತೆಯಲ್ಲೇ ಹೆರಿಗೆ ಮಾಡಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮಹಿಳೆ ನೋವಿನಿಂದ ನರಳುತ್ತಿದ್ದರು, ಸುತ್ತಮುತ್ತಲಿನ ಪರಿಸ್ಥಿತಿ ಒಂದು ಕ್ಷಣ ಸ್ತಬ್ಧವಾಯಿತು.ಮಹಿಳೆಯರು ಸುತ್ತುವರೆದು ತಮ್ಮ ಸೀರೆ ಹಾಗೂ ದುಪಟ್ಟಾವನ್ನೇ ಪರದೆಯಂತೆ ಹಿಡಿದು ಸಹಾಯ ಮಾಡಿದರು. ಪುರುಷರು ವಾಹನಗಳ ಸಂಚಾರವನ್ನು ತಡೆದು ರಸ್ತೆಯಲ್ಲಿ ದಾರಿ ಮಾಡಿಕೊಟ್ಟರು. ಅಲ್ಲಿ ಯಾರು ಯಾರಿಗೆ ಸಂಬಂಧಿಕರಲ್ಲದಿದ್ದರೂ, ಎಲ್ಲರ ಉದ್ದೇಶ ಆ ತಾಯಿ ಮತ್ತು ಮಗುವನ್ನು ರಕ್ಷಿಸುವುದೊಂದೇ ಆಗಿತ್ತು.

ಅದೃಷ್ಟವಶಾತ್, ಹತ್ತಿರದಲ್ಲೇ ಇದ್ದ ವೈದ್ಯರೊಬ್ಬರು ವಿಷಯ ತಿಳಿದು ಸ್ಥಳಕ್ಕೆ ಓಡಿ ಬಂದಿದ್ದರು. ಸುಸಜ್ಜಿತ ವೈದ್ಯಕೀಯ ಉಪಕರಣಗಳಿಲ್ಲದಿದ್ದರೂ, ಲಭ್ಯವಿದ್ದ ಸಂಪನ್ಮೂಲಗಳನ್ನು ಬಳಸಿಕೊಂಡು ಅತ್ಯಂತ ಜಾಗರೂಕತೆಯಿಂದ ರಸ್ತೆಯ ಮೇಲೆಯೇ ಹೆರಿಗೆ ಮಾಡಿಸಿದರು. ಸ್ವಲ್ಪ ಸಮಯದ ನಂತರ, ಆ ರಸ್ತೆಯ ಸದ್ದನ್ನೆಲ್ಲಾ ಮೀರಿಸಿ ಪುಟ್ಟ ಮಗುವಿನ ಅಳು ಕೇಳಿಸಿತ್ತು. ವೈದ್ಯರ ಸಮಯಪ್ರಜ್ಞೆ ಮತ್ತು ಜನರ ಸಹಕಾರದಿಂದ ತಾಯಿ ಮತ್ತು ಮಗು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿದ್ದಾರೆ. ನಂತರ ಬಂದ ಆಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More