ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಹಣ ಸಾಗಿಸುತ್ತಿದ್ದುದನ್ನು ನಾನೇ ಆಯೋಗಕ್ಕೆ ತಿಳಿಸಿದ್ದು: ತೇಜಸ್ವೀ ಸೂರ್ಯ

|

Updated on: Apr 13, 2024 | 7:20 PM

ಕ್ಷೇತ್ರದಲ್ಲಿ ಹಣಬಲ, ತೋಳ್ಬಲ ನಡೆಯಲ್ಲ, ಅಲ್ಲಿರೋದು ಪಜ್ಞಾವಂತ ಮತದಾರರು, ತಾನು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲೋದು ಮತ್ತು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗೋದು ಶತಸಿದ್ಧ ಎಂದು ತೇಜಸ್ವೀ ಸೂರ್ಯ ಹೇಳಿದರು.

ಬೆಂಗಳೂರು: ಇಂದು ಬೆಳಗ್ಗೆ ಚುನಾವಣಾಧಿಕಾರಿಗಳು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ (Bengaluru South constituency) ಸೀಜ್ ಮಾಡಿದ ಕೋಟ್ಯಾಂತರ ಹಣ ಕಾಂಗ್ರೆಸ್ ಪಕ್ಷಕ್ಕೆ (Congress party) ಸೇರಿದ್ದು, ಸೋಲು ಖಚಿತವಾಗಿರುವ ಹಿನ್ನೆಲೆಯಲ್ಲಿ ಅವರು ಹಣ ಮತ್ತು ತೋಳ್ಬಲದ ಮೂಲಕ ಗೆಲ್ಲುವ ಹುನ್ನಾರ ನಡೆಸಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಹಾಲಿ ಸಂಸದ ತೇಜಸ್ವೀ ಸೂರ್ಯ (Tejasvi Surya) ಹೇಳಿದರು. ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ಅವರು ಬೆಳಗ್ಗೆ ಸುಮಾರು 10.45 ಕ್ಕೆ ಕೆಲವು ಜನ ತನಗೆ ಫೋನ್ ಮಾಡಿ ಕಾಂಗ್ರೆಸ್ ಪಕ್ಷದ ನಾಯಕರು ಒಂದು ಕೆಂಪು ಮತ್ತೊಂದು ಬಿಳಿ ಬಣ್ಣದ ಕಾರುಗಳಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದಾಗ ತಾನು ಕೂಡಲೇ ವಿಷಯವನ್ನು ಚುನಾವಣಾ ಆಯೋಗಕ್ಕೆ ಫೋನ್ ಮಾಡಿ ವಿಷಯ ತಿಳಿಸಿದ್ದಾಗಿ ಹೇಳಿದರು. ಚುನಾವಣಾಧಿಕಾರಿ ಮತ್ತು ಪೊಲೀಸರು ಕೇವಲ 10 ನಿಮಿಷಗಳಲ್ಲಿ ಕಾರ್ಯಾಚರಣೆ ನಡೆಸಿ ಹಣ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ, ಅವರ ಕಾರ್ಯವನ್ನು ಅಭಿನಂದಿಸುವುದಾಗಿ ಸೂರ್ಯ ಹೇಳಿದರು.

ಕೆಲ ದಿನ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸುವಾಗ ಕಾರ್ಯಕರ್ತನೊಬ್ಬ ಪಿಸ್ಟಲ್ ಇಟ್ಟುಕೊಂಡು ಱಲಿಯಲ್ಲಿ ಭಾಗವಹಿಸಿದ್ದು ಬೆಳಕಿಗೆ ಬಂದಿತ್ತು. ಕ್ಷೇತ್ರದಲ್ಲಿ ಹಣಬಲ, ತೋಳ್ಬಲ ನಡೆಯಲ್ಲ, ಅಲ್ಲಿರೋದು ಪಜ್ಞಾವಂತ ಮತದಾರರು, ತಾನು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲೋದು ಮತ್ತು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗೋದು ಶತಸಿದ್ಧ ಎಂದು ತೇಜಸ್ವೀ ಸೂರ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ ಸಮಾವೇಶದಲ್ಲಿ ಅಮಿತ್ ಶಾ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಯುವ ಬಿಜೆಪಿ ನಾಯಕ ತೇಜಸ್ವೀ ಸೂರ್ಯ

Follow us on