ಯಶ್ ಜತೆ ಸಿನಿಮಾ ಮಾಡ್ತೀರಾ ಅಂತ ಕೇಳಿದ್ದಕ್ಕೆ ನಟಿ ಪೂಜಾ ಹೆಗ್ಡೆ ಹೇಳಿದ್ದೇನು?
Yash | Pooja Hegde: ‘ನಾನು ಕನ್ನಡತಿ’ ಎಂದು ಪೂಜಾ ಹೆಗ್ಡೆ ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ. ಆದಷ್ಟು ಬೇಗ ಕನ್ನಡದಲ್ಲಿ ಸಿನಿಮಾ ಮಾಡುವುದಾಗಿ ಅವರು ತಿಳಿಸಿದ್ದಾರೆ.
ನಟಿ ಪೂಜಾ ಹೆಗ್ಡೆ (Pooja Hegde) ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ನಟಿಸಿದ ಕೆಲವು ಸಿನಿಮಾಗಳು ಸೋತಿವೆ ಎಂಬುದು ನಿಜ. ಹಾಗಿದ್ದರೂ ಕೂಡ ಅವರಿಗೆ ಇರುವ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಸೈಮಾ ಪ್ರಶಸ್ತಿ ಪ್ರದಾನ (SIIMA Awards 2022) ಸಮಾರಂಭದ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಅವರು ‘ಎಷ್ಟಾದರೂ ನಾನು ಕನ್ನಡತಿ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಯಶ್ (Yash) ನಟಿಸಲಿರುವ ಮುಂದಿನ ಚಿತ್ರಕ್ಕೆ ಪೂಜಾ ನಾಯಕಿ ಆಗಬಹುದು ಎಂಬ ಮಾತು ಕೇಳಿಬರುತ್ತಿದೆ. ಆ ಬಗ್ಗೆ ಕೇಳಿದ್ದಕ್ಕೆ, ‘ಏನಾಗತ್ತೋ ನೋಡೋಣ. ಶೀಘ್ರವೇ ಕನ್ನಡದಲ್ಲಿ ಏನಾದರೂ ಮಾಡಬೇಕು ಅಂದುಕೊಂಡಿದ್ದೇನೆ’ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.
Published on: Sep 12, 2022 01:39 PM
Latest Videos