ಸಿದ್ದರಾಮಯ್ಯ ಬಗ್ಗೆ ಕಾಮೆಂಟ್ ಮಾಡಿದ ಸಿಟಿ ರವಿ ವಿರೋಧ ಪಕ್ಷದ ನಾಯಕ ತಮ್ಮತ್ತ ಬರುವುದನ್ನು ನೋಡಿ ಒಂದರೆಕ್ಷಣ ಗಾಬರಿಯಾದರು!
ಅವರ ಹಾಗೆ ಪ್ರಾಸಬದ್ಧವಾಗಿ ಮಾತಾಡುವುದಾದರೆ ಸಿದ್ದು-ಪೆದ್ದ ಅನ್ನಬಹುದಲ್ಲ ಅಂತ ಅನ್ನುತ್ತಿರುವಾಗಲೇ ಮಾಧ್ಯಮದವರು ಸಿದ್ದರಾಮಯ್ಯನರು ಬರುತ್ತಿದ್ದಾರೆ ಅಂತ ಹೇಳಿದ್ದು ಕೇಳಿ ರವಿ ಗಾಬರಿಗೊಳಗಾಗುತ್ತಾರೆ.
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi) ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ (Siddaramaiah) ಬಗ್ಗೆ ಕಾಮೆಂಟ್ ಮಾಡಿ ಗಾಬರಿಯಾದ ಪ್ರಸಂಗ ಸೋಮವಾರ ವಿಧಾನ ಸೌಧ (Vidhana Soudha) ಆವರಣದಲ್ಲಿ ನಡೆಯಿತು. ಸಿದ್ದರಾಮಯ್ಯ ತಮ್ಮ ಬಗ್ಗೆ ಸಿಟಿ-ಲೂಟಿ ಅಂತ ಮಾತಾಡಿದ್ದನ್ನು ಉಲ್ಲೇಖಿಸಿ ಅವರ ಹಾಗೆ ಪ್ರಾಸಬದ್ಧವಾಗಿ ಮಾತಾಡುವುದಾದರೆ ಸಿದ್ದು-ಪೆದ್ದ ಅನ್ನಬಹುದಲ್ಲ ಅಂತ ಅನ್ನುತ್ತಿರುವಾಗಲೇ ಮಾಧ್ಯಮದವರು ಸಿದ್ದರಾಮಯ್ಯನರು ಬರುತ್ತಿದ್ದಾರೆ ಅಂತ ಹೇಳಿದ್ದು ಕೇಳಿ ರವಿ ಗಾಬರಿಗೊಳಗಾಗುತ್ತಾರೆ. ನಂತರ ಸಾವರಿಸಿಕೊಂಡು ನಗುತ್ತಾ ವಿಷಯಾಂತರ ಮಾಡುತ್ತಾರೆ.
Latest Videos