‘ಅವಕಾಶ ಸಿಕ್ಕರೆ ಮೈಸೂರು ಸ್ಯಾಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್ ಪ್ರಭಾಕರ್
ತಮನ್ನಾ ಭಾಟಿಯಾ ಅವರು ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಿದ್ದಾರೆ. ಇದಕ್ಕೆ ಅವರು ಎರಡು ವರ್ಷಕ್ಕೆ 6 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಹೀಗಿರುವಾಗಲೇ ಎಲ್ಲಾ ಹೀರೋಗಳು ತಮಗೆ ಅವಕಾಶ ಸಿಕ್ಕರೆ ಬ್ರ್ಯಾಂಡ್ ಪ್ರಚಾರ ಮಾಡಲು ರೆಡಿ ಎಂದಿದ್ದಾರೆ.
ತಮನ್ನಾ ಭಾಟಿಯಾ (Tamannah Bhatiaa) ಅವರು ಮೈಸೂರು ಸ್ಯಾಂಡಲ್ಸೋಪ್ ರಾಯಭಾರಿ ಆಗಿದ್ದು, ಇದಕ್ಕಾಗಿ ಎರಡು ವರ್ಷಕ್ಕೆ 6 ಕೋಟಿ ಪಡೆದಿದ್ದು ಚರ್ಚೆಯ ಕೇಂದ್ರ ಬಿಂದು ಆಗಿದೆ. ಹೀಗಿರುವಾಗಲೇ ಎಲ್ಲಾ ಕಲಾವಿದರು ತಮಗೆ ಅವಕಾಶ ಸಿಕ್ಕರೆ ರಾಯಭಾರಿ ಆಗಲು ರೆಡಿ ಎಂದಿದ್ದಾರೆ. ಈಗ ಈ ಬಗ್ಗೆ ಮಾತನಾಡಿರೋ ವಿನೋದ್ ಪ್ರಭಾಕರ್, ‘ಕನ್ನಡ ಕಲಾವಿದರನ್ನು ಮಾಡಲು ಅವಕಾಶ ಇತ್ತು. ಈ ಮೊದಲು ನಂದಿನಿಗೆ ಪುನೀತ್ ರಾಜ್ಕುಮಾರ್ ಪ್ರಚಾರ ರಾಯಭಾರಿ ಆಗಿದ್ದರು’ ಎಂದಿರೋ ವಿನೋದ್ ಪ್ರಭಾಕರ್ ತಮಗೆ ಅವಕಾಶ ಸಿಕ್ಕರೆ ತಾವು ಮೈಸೂರು ಸ್ಯಾಂಡಲ್ ಸೋಪ್ನ ಪ್ರಚಾರ ರಾಯಭಾರಿ ಆಗಲು ರೆಡಿ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: May 28, 2025 10:37 AM
