‘ನಾನು ಭಿಕ್ಷುಕನ ಪಾತ್ರ ಮಾಡೋಕೂ ರೆಡಿ, ಅವಕಾಶ ಕೊಡಿ ಅಷ್ಟೇ’; ಭಾವುಕರಾದ ಹಾಸ್ಯನಟ ಮಿತ್ರ
ಮಿತ್ರ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ.
ಸಿಲ್ಲಿ ಲಲ್ಲಿ ಧಾರಾವಾಹಿ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಕಲಾವಿದ ಮಿತ್ರ ಅವರು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಈಗ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಈ ವೇಳೆ ಅವರು ತಮಗೆ ಸರಿಹೊಂದುವ ಪಾತ್ರವನ್ನು ನೀಡಿ ಎಂದು ಕೋರಿದ್ದಾರೆ.
ಮಿತ್ರ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ‘ನಾನು ಹೀರೋ ಅಲ್ಲ, ಕಲಾವಿದ. ನನ್ನ ದೇಹದ ಬಣ್ಣಕ್ಕೆ, ಗಾತ್ರಕ್ಕೆ ಯಾವ ಪಾತ್ರ ಹೊಂದುತ್ತದೆಯೋ ಅದನ್ನು ನೀಡಿ. ನಾನು ನಿರ್ವಹಿಸುತ್ತೇನೆ. ಹೀರೋ ಪಾತ್ರ ಮಾಡೋಕೆ ನನ್ನ ಬಳಿ ಸಾಧ್ಯವಿಲ್ಲ. ನನ್ನ ಸಾಮರ್ಥ್ಯ ಏನು ಎನ್ನುವುದು ನನಗೆ ಗೊತ್ತು. ನನಗೆ ಅವಕಾಶ ನೀಡಿ. ನಾನು ಮಾಡಿ ತೋರಿಸುತ್ತೇನೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಸಿಲ್ಲಿ ಲಲ್ಲಿ ಸೀರಿಯಲ್ನಲ್ಲಿ ಯಶ್ ನಟಿಸಿದ್ರು, ಇಂದು ಐಕಾನ್ ಆಗಿದ್ದಾರೆ’: ಹಾಸ್ಯ ನಟ ಮಿತ್ರ