ನಾನು ರಾಜ್ಯಪಾಲ, ಲೋಕಾಯುಕ್ತಗೆ ವಕ್ತಾರನಲ್ಲ, ಕೇವಲ ಕಾಂಗ್ರೆಸ್ ಪಕ್ಷದ ವಕ್ತಾರ: ಡಿಕೆ ಶಿವಕುಮಾರ್

|

Updated on: Aug 20, 2024 | 12:35 PM

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಸಿಎಂ ಅದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ನ್ಯಾಯಾಲಯವು ಆಗಸ್ಟ್ 29 ರವರೆಗೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದೂರನ್ನು ವಿಚಾರಣೆಗೆ ಕೈಗೆತ್ತಿಕೊಳ್ಳದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿರುವುದರಿಂದ ಸದ್ಯಕ್ಕೆ ಪ್ರಕರಣದ ಭರಾಟೆ ತಗ್ಗಿದೆ.

ಬೆಂಗಳೂರು: ಇದು ಕಾಮನ್ ಅಗಿಬಿಟ್ಟಿದೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬಗ್ಗೆ ಪ್ರಶ್ನೆ ಕೇಳಿದಾಕ್ಷಣ ಡಿಕೆ ಶಿವಕುಮಾರ್ ಸಿಡುಕುತ್ತಾರೆ. ನಗರದಲ್ಲಿಂದು ರಾಜೀವ್ ಗಾಂಧಿಯವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್ ಪತ್ರಕರ್ತೆಯೊಬ್ಬರು ಕುಮಾರಸ್ವಾಮಿ ವಿರುದ್ಧ ಎಸ್​ಐಟಿ ಅಧಿಕಾರಿಗಳು ಮತ್ತೊಮ್ಮೆ ದೋಷಾರೋಪಣೆ ಪಟ್ಟಿ ಸಲ್ಲಿಸುತ್ತಿದ್ದಾರೆ ಆದರೆ, ಸಿಎಂ ಸಿದ್ದರಾಮಯ್ಯ ವಿರುದ್ಧ ಯಾಕೆ ಸಲ್ಲಿಸುತ್ತಿಲ್ಲ ಎಂದು ಕೇಳಿದಾಗ, ನಂಗೊತ್ತಿಲ್ಲಮ್ಮ, ನಾನು ರಾಜ್ಯಪಾಲರಿಗೆ ವಕ್ತಾರಲ್ಲ ಮತ್ತು ಲೋಕಾಯುಕ್ತಗೂ ವಕ್ತಾರನಲ್ಲ, ನಾನೇನಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸ್ಪೋಕ್ಸ್ ಪರ್ಸನ್ ಅನ್ನುತ್ತಾರೆ. ನಾಳೆ ಬಿಜೆಪಿ ನಾಯಕರು ಮತ್ತೊಮ್ಮೆ ಪ್ರತಿಭಟನೆ ನಡೆಸಲಿರುವ ವಿಷಯದ ಬಗ್ಗೆ ಅವರ ಗಮನ ಸೆಳೆದಾಗ, ರಾಜ್ಯದ ಬಿಜೆಪಿ ನಾಯಕರು ರಾಜ್ಯಪಾಲರನ್ನು ಪಕ್ಷದ ಏಜೆಂಟ್ ಆಗಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಡಿಕೆ ಶಿವಕುಮಾರ್​ ಡಿಸೆಂಬರ್​ ಒಳಗೆ ಸಿಎಂ ಆಗುತ್ತಾರಂತೆ: ಹೊಸ ಬಾಂಬ್ ಸಿಡಿಸಿದ ಅಶೋಕ್

Follow us on