ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಕಿಚ್ಚ ಸುದೀಪ್ ಅವರು ‘ಮಾರ್ಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಡಿಸೆಂಬ್ 25ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ ಬಗ್ಗೆ ಹಂಚಿಕೊಳ್ಳಲು ಸುದೀಪ್ ಅವರು ಸಾಕಷ್ಟು ಸಂದರ್ಶನ ನೀಡುತ್ತಾ ಇದ್ದಾರೆ. ಅವರು ಚಿತ್ರದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಇನ್ನಷ್ಟು ವಿಷಯ ಹಂಚಿಕೊಂಡರು.
ಸುದೀಪ್ ಅವರು ಬೇಡಿಕೆಯ ನಟ. ಅವರು ಸಿನಿಮಾ ರಂಗದ ಹಲವು ಕೆಲಸಗಳಲ್ಲಿ ಭಾಗಿ ಆಗುತ್ತಾರೆ. ಅವರು ಎಲ್ಲಾ ಕೆಲಸಗಳಿಗೂ ದುಡ್ಡು ಚಾರ್ಜ್ ಮಾಡೋದಿಲ್ಲ. ಕೆಲವೊಂದನ್ನು ಪ್ರೀತಿಗೋಸ್ಕರವೂ ಮಾಡುತ್ತಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಅಶೋಕ್ ಖೇಣಿ ತುಂಬಾ ಒಳ್ಳೆಯ ವ್ಯಕ್ತಿ. ನಾವು ಅವರನ್ನು ಸಂಪಾದಿಸಿದ್ದೇವೆ. ನಾನು ದುಡ್ಡು ತೆಗೆದುಕೊಳ್ಳದೆ ಸಾಕಷ್ಟು ಸಹಾಯವನ್ನು ಮಾಡಿದ್ದೇನೆ. ಸಿಸಿಎಲ್ಗೋಸ್ಕರ ಎರಡು ತಿಂಗಳು ಕೊಡುತ್ತೇನೆ. ಎರಡು ತಿಂಗಳು ಅವರು ನನ್ನನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ನಾನು ಸಖತ್ ದುಬಾರಿ. ಹೀಗಾಗಿ, ವಿಷ್ಣುವರ್ಧನ್ ಸಮಾಧಿ ಎಂಬ ವಿಷಯ ಬಂದಾಗ ನಾನು ಅವರಿಂದ ಜಾಗ ತೆಗೆದುಕೊಂಡೆ’ ಎಂದಿದ್ದಾರೆ ಸುದೀಪ್. ಸಿಸಿಎಲ್ನಲ್ಲಿ ‘ಕರ್ನಾಟಕ ಬುಲ್ಡೋಜರ್ಸ್’ ತಂಡದ ಒಡೆತನ ಅಶೋಕ್ ಖೇಣಿ ಬಳಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

