International Yoga Day: ಬೆಳಗಿನ ಉಪಹಾರಕ್ಕೆ ನಮ್ಮ ಅಹ್ವಾನವನ್ನು ಪ್ರಧಾನಿಯವರು ಒಪ್ಪಿಕೊಂಡಿದ್ದು ಸಂತೋಷವೆನಿಸುತ್ತಿದೆ: ಪ್ರಮೋದಾ ದೇವಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 21, 2022 | 10:46 AM

ಪ್ರಮೋದಾ ದೇವಿಯವರು ಪ್ರಧಾನಿಯವರನ್ನು ಬೆಳಗಿನ ಉಪಹಾರಕ್ಕಾಗಿ ಅರಮನೆಗೆ ಆಹ್ವಾನಿಸಿದ್ದಾರೆ. ಅವರು ತಮ್ನ ಅಹ್ವಾನವನ್ನು ಸ್ವೀಕರಿಸಿರುವುದು ಬಹ ಸಂತೋಷ ನೀಡಿದೆ ಅಂತ ಅವರು ಹೇಳಿದರು.

Mysuru: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದಲ್ಲಿ ಮೈಸೂರಲ್ಲೇ ಹುಟ್ಟುಕಂಡ ಯೋಗ ಕಾರ್ಯಕ್ರಮ ಇಲ್ಲಿನ ಅರಮನೆ ಮೈದಾನದಲ್ಲಿ (palace ground) ಅದ್ಭುತವಾಗಿ ನಡೆಯುತ್ತಿದೆ. ಸಾವಿರಾರು ಯೋಗಾಸಕ್ತರ ಜೊತೆ ಮೈಸೂರು ರಾಜಮನೆತನದ ಪ್ರಮೋದಾ ದೇವಿಯವರು (Pramoda Devi) ಸಹ ಭಾಗವಹಿಸಿದ್ದರು. ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ ರಾಮ್, ಪ್ರಮೋದಾ ದೇವಿಯವರೊಂದಿಗೆ ಮಾತಾಡಿದಾಗ, ಕೊರೋನಾದಿಂದಾಗಿ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಯೋಗ ದಿನಾಚರಣೆ ಮೈಸೂರಲ್ಲಿ ಮತ್ತು ಅದರಲ್ಲೂ ವಿಶೇಷವಾಗಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಆರಂಭಗೊಂಡಿರುವುದು ತುಂಬಾ ಸಂತೋಷ ನೀಡಿದೆ ಎಂದರು.

ಪ್ರಮೋದಾ ದೇವಿಯವರು ಪ್ರಧಾನಿಯವರನ್ನು ಬೆಳಗಿನ ಉಪಹಾರಕ್ಕಾಗಿ ಅರಮನೆಗೆ ಆಹ್ವಾನಿಸಿದ್ದಾರೆ. ಅವರು ತಮ್ನ ಅಹ್ವಾನವನ್ನು ಸ್ವೀಕರಿಸಿರುವುದು ಬಹ ಸಂತೋಷ ನೀಡಿದೆ ಅಂತ ಅವರು ಹೇಳಿದರು. ಪ್ರಧಾನಿ ಮೋದಿಯವರಿಗೆ ದಕ್ಷಿಣಭಾರತದ ತಿಂಡಿಗಳನ್ನೇ ನೀಡಲಾಗುವುದು ಮತ್ತು ಮೈಸೂರಿನ ಸಂಸ್ಕೃತಿಯ ಭಾಗವಾಗಿರುವ ಮೈಸೂರು ಪಾಕನ್ನು ತಪ್ಪದೆ ಬಡಿಸುತ್ತೇವೆ ಎಂದು ಪ್ರಮೋದಾ ದೇವಿ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.