ದಾವಣಗೆರೆ ಉಸ್ತುವಾರಿ ಸಚಿವರ ದಬ್ಬಾಳಿಕೆಯನ್ನು ಸಹಿಸಿಕೊಂಡಿರುವುದು ಸಾಧ್ಯವಿಲ್ಲ: ಬಸವರಾಜು ವಿ ಶಿವಗಂಗಾ
ಜಿಲ್ಲಾ ಉಸ್ತುವಾರಿ ಸಚಿವ ಹೇಳಿದಂತೆ ಕೇಳಿಕೊಂಡಿರುವುದು ಸಾಧ್ಯವಿಲ್ಲ, ತನ್ನ ಶಾಸಕ ಸ್ಥಾನ ಹೋದರೂ ಕ್ಯಾರೆ ಇಲ್ಲ, ನೇಮಕಾತಿಗಳಿಗೆ ಮಲ್ಲಿಕಾರ್ಜುನ ನೀಡುವ ಪತ್ರಗಳೇ ಅಂತಿಮ ಮಾನದಂಡವಾಗಬಾರದು, ಜಿಲ್ಲೆಯ ಬೇರೆ ಶಾಸಕರು ನೀಡುವ ಪತ್ರಗಳನ್ನೂ ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂದು ತಾನು ಮುಖ್ಯಮಂತ್ರಿಯವರಿಗೆ ಮನವಿ ಮಾಡುವುದಾಗಿ ಶಾಸಕ ಬಸವರಾಜು ಶಿವಗಂಗಾ ಹೇಳಿದರು.
ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳಗಳು ಹೊಸವೇನಲ್ಲ, ಇದಕ್ಕೆ ಹೊಸ ಸೇರ್ಪಡೆ ಎಂದರೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ವಿರುದ್ಧ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜು ವಿ ಶಿವಗಂಗಾ ತೀವ್ರ ಅಸಮಾಧಾನ ಹೊರಹಾಕಿರುವುದು. ಬಸವರಾಜು ಹೇಳುವ ಪ್ರಕಾರ ಮಲ್ಲಿಕಾರ್ಜುನ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಚನ್ನಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ವಿರುದ್ಧ ಮಲ್ಲಿಕಾರ್ಜುನ ಅವರು ಮತ್ಯಾರನ್ನೋ ಗೆಲ್ಲಿಸಿದರು ಮತ್ತು ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷನನ್ನು ಮುಂದುವರರಿಸುವಂತೆ ಹೇಳುತ್ತಿದ್ದಾರೆ, ಆದರೆ ಕಾಂಗ್ರೆಸ್ ಮುಖಂಡನನ್ನು ಅಧ್ಯಕ್ಷ ಸ್ಥಾನಕ್ಕೆ ತರಬೇಕೆಂದು ಬಸವರಾಜು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್‌ನವರಿಂದಲೇ ಕಾಂಗ್ರೆಸ್ ಪಕ್ಷ ಸೋಲುತ್ತಿದೆ: ಎಸ್ಎಸ್ ಮಲ್ಲಿಕಾರ್ಜುನ