Loading video

ಹಳೆಯ ಬಜೆಟ್ ಅನ್ನೇ ಈ ವರ್ಷವೂ ಓದಿ ಸಿದ್ದರಾಮಯ್ಯ ಜನರನ್ನು ಮೂರ್ಖರಾಗಿಸಿದ್ದಾರೆ: ಹೆಚ್ ವಿಶ್ವನಾಥ್

|

Updated on: Mar 08, 2025 | 2:24 PM

ಸಿದ್ದರಾಮಯ್ಯನವರಿಗೆ ಹಣಕಾಸು ಇಲಾಖೆಯ ಜವಾಬ್ದಾರಿ ನೀಡಿ ಮೊದಲ ಬಾರಿ ಬಜೆಟ್ ಮಂಡಿಸುವ ಅವಕಾಶವನ್ನು ನೀಡಿದ್ದು ಆಗ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ದೇವೇಗೌಡರು, ಅದಾದ ಮೇಲೆ ದಾಖಲೆ ಸಲ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯವರು ಗೌಡರಿಗೆ ಒಮ್ಮೆಯಾದರೂ ಕೃತಜ್ಞತೆ ಸಲ್ಲಿಸಿದರೇ? ತೆರಿಗೆ ಪಾವತಿಸುವ ಜನರಿಗೆ ಧನ್ಯವಾದ ಹೇಳಿದರೆ? ಎಂದು ವಿಶ್ವನಾಥ್ ಪ್ರಶ್ನಿಸಿದರು.

ಬೆಂಗಳೂರು, ಮಾರ್ಚ್ 8: ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಬಿಜೆಪಿ ಎಮ್ಮೆಲ್ಸಿ ಹೆಚ್ ವಿಶ್ವನಾಥ್, ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸಿದ ಬಜೆಟ್ ನಲ್ಲಿ ಹೊಸತೇನವೇನೂ ಇಲ್ಲ, ಹಿಂದಿನ ಸಲ ಓದಿದ್ದನ್ನೇ ಈ ಸಲವೂ ಓದಿ ಜನರನ್ನು ಮೂರ್ಖರನ್ನಾಗಿಸಿದ್ದಾರೆ, ದೇಶಕ್ಕೆ ಹೊಸತನವನ್ನು ನೀಡಿದ ಖ್ಯಾತಿ ಕಾಂಗ್ರೆಸ್ ಗೆ ಸಲ್ಲುತ್ತದೆ, ದಾಖಲೆಯ 16 ನೇ ಸಲ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯಗೆ ಏಕತಾನತೆ ಗೊತ್ತಾಗಲಿಲ್ಲವೇ? ಮನಮೋಹನ್ ಸಿಂಗ್ ರನ್ನು ನೋಡಿ ಅವರು ಕಲಿಯಬಾರದೇ ಎಂದು ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಚಿವ ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್

Published on: Mar 08, 2025 01:43 PM