ಸಿಎಂ ಬದಲಾವಣೆ ವಿಷಯದ ಬಗ್ಗೆ ದೆಹಲಿಯಲ್ಲಿ ಏನು ಚರ್ಚೆ ನಡೆದಿದೆ ಗೊತ್ತಿಲ್ಲ: ಸತೀಶ್ ಜಾರಕಿಹೊಳಿ

ಜೋಳದ ರೊಟ್ಟಿ ತಿನ್ನಬೇಕಿನಿಸಿದಾಗೆಲ್ಲ ಸತೀಶ್ ಜಾರಕಿಹೊಳಿ ಮನೆಗೆ ಹೋಗುತ್ತೇನೆ ಎಂದು ಪರಮೇಶ್ವರ್ ಹೇಳುತ್ತಾರೆ. ಸರ್, ಬೆಂಗಳೂರಲ್ಲಿ ಈಗ ಎಲ್ಲ ಕಡೆ ಜೋಳದ ರೊಟ್ಟಿ ಸಿಗುವ ಉತ್ತರ ಕರ್ನಾಟಕದ ಖಾನಾವಳಿಗಳು ತಲೆಯೆತ್ತಿವವೆ, ರೊಟ್ಟಿಗಾಗಿ ನಿಮಗೆ ಸತೀಶ್ ಅವರ ಮನೆಯೇ ಆಗಬೇಕೇ?

ಸಿಎಂ ಬದಲಾವಣೆ ವಿಷಯದ ಬಗ್ಗೆ ದೆಹಲಿಯಲ್ಲಿ ಏನು ಚರ್ಚೆ ನಡೆದಿದೆ ಗೊತ್ತಿಲ್ಲ: ಸತೀಶ್ ಜಾರಕಿಹೊಳಿ
|

Updated on: Aug 30, 2024 | 5:49 PM

ಬೆಂಗಳೂರು: ಸತೀಶ್ ಜಾರಕಿಹೊಳಿ ಮನದಲ್ಲೇನಿದೆ ಅಂತ ಅವರ ಆಪ್ತರಿಗೂ ಗೊತ್ತಾಗಲಾರದು. ಮುಂದಿನ ಸಿಎಂ ನೀವೇನಾ ಅಂತ ಕೇಳಿದರೆ ಅರ್ಥಗರ್ಭಿತವಾಗಿ ನಗುತ್ತಾರೆ ಮತ್ತು ಮರುಕ್ಷಣವೇ ಅಂಥ ಪರಿಸ್ಥಿತಿಯೇನೂ ರಾಜ್ಯದಲ್ಲಿ ಎದುರಾಗಿಲ್ಲ ಅದರೆ ದೆಹಲಿಯಲ್ಲಿ ಏನು ಮಾತುಕತೆ ನಡೆದಿದೆಯೋ ಗೊತ್ತಿಲ್ಲ, ಸಿದ್ದರಾಮಯ್ಯನವರನ್ನು ಬದಲಾಯಿಸುವ ಪ್ರಮೇಯ ಉದ್ಭವವಾಗಲಾರದು, ಅವರೇ ಮುಂದುವರಿಯುತ್ತಾರೆ ಎಂದು ಹೇಳಿ ಪರಮೇಶ್ವರ್ ಅವರು ಅಗಾಗ್ಗೆ ಮನೆಗ ಭೇಟಿ ನೀಡುತ್ತಾರೆಯೇ ಹೊರತು ತನ್ನ ಮನೆ ಪವರ್ ಸೆಂಟರ್ ಅಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಹೆಚ್ಚಾಯ್ತು ಸವದಿ – ಸತೀಶ್ ಜಾರಕಿಹೊಳಿ ಫೈಟ್: ಸಚಿವರ ವಿರುದ್ಧ ಸವದಿ ಬೆಂಬಲಿಗರಿಂದ ಆಕ್ರೋಶ

Follow us