ವಿಪಕ್ಷ ನಾಯಕನಾಗಿ ಮೂರು ತಿಂಗಳು ನಂತರ ಪುನಃ ದೆಹಲಿಗೆ ಬಂದು ವರದಿ ಸಲ್ಲಿಸಲು ಹೇಳಿದ್ದಾರೆ: ಅಶೋಕ
ಪಕ್ಷದ ರಾಜ್ಯಾಧ್ಯಕ್ಷನನ್ನು ಬದಲಾಯಿಸುವ ಬಗ್ಗೆಯೂ ಅಮಿತ್ ಶಾ ಅವರು ತನ್ನೊಂದಿಗೆ ಚರ್ಚೆ ನಡೆಸಲಿಲ್ಲ, ಇನ್ನೂ ಹಲವಾರು ರಾಜ್ಯಗಳಲ್ಲಿ ಪಕ್ಷದ ಅಧ್ಯಕ್ಷನನ್ನು ಆರಿಸಬೇಕಿದೆ, ಕರ್ನಾಟಕದ ಪಾಳಿ ಈಗಲೇ ಅಲ್ಲ ಕೊನೆಯಲ್ಲಿ ಬರುತ್ತದೆ ಎಂದು ಅಶೋಕ ಹೇಳಿದರು. ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆ ತಾನು ಸಹ ಮಾಧ್ಯಮಗಳಲ್ಲಿ ನೋಡಿದೆ, ಆದರೆ ಪಕ್ಷದ ರಾಷ್ಟ್ರೀಯಮಟ್ಟದಲ್ಲಿ ಅಂಥ ಚರ್ಚೆಯೇನೂ ನಡೆದಿಲ್ಲ ಎಂದು ಅಶೋಕ ಹೇಳಿದರು.
ಮೈಸೂರು, ಜೂನ್ 28: ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನಾಗಿ ಮತ್ತೊಬ್ಬ ನಾಯಕನನ್ನು ಆರಿಸಲಾಗುತ್ತದೆಯೇ, ಸೂಕ್ತ ಮುಖಂಡನಿಗಾಗಿ ತಲಾಶ್ ಜಾರಿಯಲ್ಲಿದೆಯೇ ಅಂತ ಕೇಳಿದಾಗ ಆರ್ ಅಶೋಕ, ಒಬ್ಬ ವಿರೋಧ ಪಕ್ಷದ ನಾಯಕನಾಗಿ ಮೂರು ತಿಂಗಳಿಗೊಮ್ಮೆ ದೆಹಲಿಗೆ ಬಂದು ರಾಜ್ಯದ ವಿದ್ಯಮಾನಗಳ ಬಗ್ಗೆ ವರದಿ ಸಲ್ಲಿಸುವಂತೆ ಗೃಹ ಸಚಿವ ಅಮಿತ್ ಶಾ (Home Minister Amit Shah) ಹೇಳಿದ್ದಾರೆ ಹಾಗಾಗಿ ದೆಹಲಿಗೆ ಹೋಗಿದ್ದೆ ಮತ್ತು ಮೂರು ತಿಂಗಳು ಕಳೆದ ಬಳಿಕ ಪುನಃ ಬಂದು ವರದಿ ಸಲ್ಲಿಸುವಂತೆ ಹೇಳಿದ್ದಾರೆ ಎಂದರು. ಪುನಃ ವರದಿ ಸಲ್ಲಿಸಬೇಕೆಂದು ತನಗೆ ಹೇಳಿರುವುದರ ಅರ್ಥವೇನು? ತಾನು ವಿರೋಧ ಪಕ್ಷದ ನಾಯಕನಾಗಿ ಮುಂದುವರಿಯುತ್ತೇನೆ ಅಂತ ತಾನೇ? ನಿನ್ನೆ ನಾನು ದೆಹಲಿಯಲ್ಲಿದ್ದ ಕಾರಣ ಅಶ್ವಥ್ ನಾರಾಯಣ ಅವರ ಮನೆಯಲ್ಲಿ ಸಭೆ ನಡೆಸಿದ್ದಾರೆ, ನಾನು ಇಲ್ಲೇ ಇದ್ದಿದ್ದರೆ ನನ್ನ ಮನೆಯಲೇ ಸಭೆ ನಡೆಯುತ್ತಿತ್ತು ಎಂದು ಅಶೋಕ ಹೇಳಿದರು.
ಇದನ್ನೂ ಓದಿ: ಸರ್ಕಾರವನ್ನು ಕಿತ್ತೆಸೆಯುವವರೆಗೆ ಬಿಜೆಪಿಯ ಹೋರಾಟ ಮುಂದುವರಿಯಲಿದೆ, ವಿಶ್ರಮಿಸುವುದಿಲ್ಲ: ಅರ್ ಅಶೋಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ