ಸಿಬಿಐಯನ್ನು ದೇವೇಗೌಡರು ಚೋರ್ ಬಚಾವೋ ಸಂಸ್ಥೆ ಅಂದಿದ್ದರು: ಸಿದ್ದರಾಮಯ್ಯ, ಮುಖ್ಯಮಂತ್ರಿ

ಬಿಜೆಪಿಯರು 2013-2018 ರವರೆಗೆ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ ಅಂತ ಸಿದ್ದರಾಮಯ್ಯ ಹೇಳಿದಾಗ ಅವರ ಪಕ್ಕದಲ್ಲಿದ್ದ ಸಚಿವ ಹೆಚ್ ಸಿ ಮಹದೇವಪ್ಪ 2013-18ರಲ್ಲಿ ನಾವು ಅಧಿಕಾರದಲ್ಲಿದ್ದೆವು ಅನ್ನುತ್ತಾರೆ! ಸಿದ್ದರಾಮಯ್ಯ ಅವರ ಕಡೆ ನೋಡುತ್ತಾರೆಯೇ ಹೊರತು ತಮ್ಮ ವಾಕ್ಯವನ್ನು ಸರಿಪಡಿಸಲ್ಲ.

ಸಿಬಿಐಯನ್ನು ದೇವೇಗೌಡರು ಚೋರ್ ಬಚಾವೋ ಸಂಸ್ಥೆ ಅಂದಿದ್ದರು: ಸಿದ್ದರಾಮಯ್ಯ, ಮುಖ್ಯಮಂತ್ರಿ
|

Updated on: May 10, 2024 | 1:08 PM

ಮೈಸೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಮುಗಿದ ಬಳಿಕ ಮಾಧ್ಯಮದ ಕೆಮೆರಾಗಳಿಗೆ ಬೀಳದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇವತ್ತು ಮೈಸೂರಲ್ಲಿ ಕಾಣಿಸಿಕೊಂಡು ಪತ್ರಕರ್ತರೊಂದಿಗೆ ಮಾತು ಸಹ ಆಡಿದರು. ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರರಣ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ರಾಜ್ಯಪಾಲರನ್ನು ಅಗ್ರಹಿಸಿದ್ದಾರೆ ಎಂದು ಹೇಳಿದ್ದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ತನಿಖೆಗಾಗಿ ತಾವು ಈಗಾಗಲೇ ಎಸ್ಐಟಿ ರಚಿಸಿಯಾಗಿದೆ, ರಾಜ್ಯ ಪೊಲೀಸ್ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ, ಅವರು ನಿಷ್ಪಕ್ಷಪಾತದಿಂದ ತನಿಖೆ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದರು. ಬಿಜೆಪಿಯರು 2013-2018 ರವರೆಗೆ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ ಅಂತ ಸಿದ್ದರಾಮಯ್ಯ ಹೇಳಿದಾಗ ಅವರ ಪಕ್ಕದಲ್ಲಿದ್ದ ಸಚಿವ ಹೆಚ್ ಸಿ ಮಹದೇವಪ್ಪ 2013-18ರಲ್ಲಿ ನಾವು ಅಧಿಕಾರದಲ್ಲಿದ್ದೆವು ಅನ್ನುತ್ತಾರೆ! ಸಿದ್ದರಾಮಯ್ಯ ಅವರ ಕಡೆ ನೋಡುತ್ತಾರೆಯೇ ಹೊರತು ತಮ್ಮ ವಾಕ್ಯವನ್ನು ಸರಿಪಡಿಸಲ್ಲ. ಮುಂದುವರಿದು ಮಾತಾಡುವ ಅವರ ಬಿಜೆಪಿ ಸಿಬಿಐಯನ್ನು ಕರಪ್ಷನ್ ಬ್ಯೂರೋ ಆಫ್ ಇಂಡಿಯ ಅಂತ ಕರೆದರೆ ದೇವೇಗೌಡರು, ಚೋರ್ ಬಚಾವೋ ಸಂಸ್ಥೆ ಎಂದಿದ್ದರು ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ವಿಡಿಯೋ ಪ್ರಕರಣ: ಎಸ್​ಐಟಿ ಎಂದರೆ ಸಿದ್ದರಾಮಯ್ಯ, ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್: ಕುಮಾರಸ್ವಾಮಿ ಕಿಡಿ

Follow us