ನಾನು ಕುಮಾರಸ್ವಾಮಿ ವಿರುದ್ಧ ದೂರಿಲ್ಲ, ಆದರೆ ಅವರು ಯಾಕೆ ತಾನು ಈಡಿಗೆ ದೂರು ಕೊಟ್ಟಿಲ್ಲ ಅಂತ ಹೇಳಿದರು? ಜಮೀರ್ ಅಹ್ಮದ್
ಜಮೀರ್ ನೇರವಾಗಿ, ಕುಮಾರಸ್ವಾಮಿಯ ಮೇಲೆ ಆಪಾದನೆ ಹೊರಿಸಲಿಲ್ಲ. ವರದಿಗಾರ ಹೇಳಿದ್ದನ್ನೇ ಆಧಾರವಾಗಿಟ್ಟುಕೊಂಡು ಒಂದು ಗಾಳ ಎಸೆದು ಕುಮಾರಸ್ವಾಮಿಯವರನ್ನು ಕಟಕಟೆಯಲ್ಲಿ ನಿಲ್ಲಿಸಿದರು. ರಾಜಕಾರಣಿಗಳು ಮಾತಿನಲ್ಲಿ ಚಾಣಾಕ್ಷರು ಅನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ?
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ತನ್ನ ಮನೆಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ನಂತರ ಸದರಿ ದಾಳಿಯ ಹಿಂದೆ ಜಮೀರ್ ವಿರೋಧಿಗಳ ಕೈವಾಡ ಇದೆಯೆಂಬ ಮಾತುಗಳು ಒಂದೆರಡು ದಿನಗಳಿಂದ ಕೇಳಿ ಬರುತ್ತಿವೆ. ಜನಸಾಮಾನ್ಯರಿಗೆ ಅರ್ಥವಾಗದ ಪ್ರಶ್ನೆಯೆಂದರೆ, ರಾಜಕಾರಣಿಗಳ ಮಾತು ಅಥವಾ ದೂರನ್ನೇ ಆಧಾರವಾಗಿಟ್ಟುಕೊಂಡು ಈಡಿ ದಾಳಿ ನಡೆಸುತ್ತದೆಯೇ? ಒಂದು ಪಕ್ಷ ಅದೇ ನಿಜವಾಗಿದ್ದರೆ, ಪ್ರತಿದಿನ ಈಡಿ ಕಚೇರಿ ಮುಂದೆ ರಾಜಕೀಯ ನಾಯಕರ ಹಿಂಡು ನೆರೆದಿರುತಿತ್ತು. ನಾಯಕರು ತಮ್ಮ ವಿರೋಧಿಗಳ ವಿರುದ್ಧ ದೂರುಗಳನ್ನು ದಾಖಲಿಸುವುದು ಮುಗಿಯದ ಪ್ರಕ್ರಿಯೆಯಾಗಿರುತಿತ್ತು.
ಈಡಿ ದಾಳಿ ನಡೆದ ಜಮೀರ್ ಮಾಧ್ಯಮದವರಿಗೆ ಸಮಜಾಯಿಷಿಗಳ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋಮವಾರದಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿದ ಶಾಸಕರು, ದಾಳಿಯ ಹಿಂದೆ ಕುಮಾರಸ್ವಾಮಿಯವರು ತಾನು ದೂರು ನೀಡಿಲ್ಲ ಅಂತ ಸ್ಪಷ್ಟ ಪಡಿಸಿದ್ದಾರೆ ಅಂತ ಒಬ್ಬ ವರದಿಗಾರರು ಹೇಳಿದಾಗ, ಅಂಥದೊಂದು ಮಾತಿಗೆ ಕಾಯುತ್ತಿದ್ದಂತೆ ಕಂಡ ಶಾಸಕರು, ಕುಮಾರಸ್ವಾಮಿ ಹಾಗೆ ಹೇಳಲು ಕಾರಣವೇನು? ಅವರೇ ರೇಡ್ ಮಾಡಿಸಿದ್ದು ಅಂತ ತಾನು ಎಲ್ಲೂ ಹೇಳಿಲ್ಲ, ಹಾಗಿದ್ದ ಮೇಲೆ ಆವರಿಗೆ ಅಂಥ ಹೇಳಿಕೆ ನೀಡುವ ಅಗತ್ಯವೇನಿತ್ತು? ಅವರಾಡಿರುವ ಮಾತಿ ಧಾಟಿ ನೋಡಿದರೆ ಅವರೇ ಈಡಿಗೆ ದೂರು ನೀಡಿದ್ದಾರೆನೋ ಎಂಬ ಸಂಶಯ ಮೂಡುತ್ತಿದೆ, ಎಂದು ಹೇಳಿದರು.
ಜಮೀರ್ ನೇರವಾಗಿ, ಕುಮಾರಸ್ವಾಮಿಯ ಮೇಲೆ ಆಪಾದನೆ ಹೊರಿಸಲಿಲ್ಲ. ವರದಿಗಾರ ಹೇಳಿದ್ದನ್ನೇ ಆಧಾರವಾಗಿಟ್ಟುಕೊಂಡು ಒಂದು ಗಾಳ ಎಸೆದು ಕುಮಾರಸ್ವಾಮಿಯವರನ್ನು ಕಟಕಟೆಯಲ್ಲಿ ನಿಲ್ಲಿಸಿದರು. ರಾಜಕಾರಣಿಗಳು ಮಾತಿನಲ್ಲಿ ಚಾಣಾಕ್ಷರು ಅನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ?
ಇದನ್ನೂ ಓದಿ: Zameer on HDK : ಕುಮಾರಸ್ವಾಮಿ ಅಧಿಕಾರಕ್ಕಾಗಿ ಯಾವಾಗ ಬೇಕಾದರೂ ಪಲ್ಟಿ ಹೊಡಿತಾನೆ