ಮೈಶುಗರ್ ಶಾಲೆಯನ್ನು ಕಾಂಗ್ರೆಸ್ ಶಾಸಕರು ಯಾರಪ್ಪನ ಆಸ್ತಿ ಅಂದುಕೊಂಡಿದ್ದಾರೆ? ಹೆಚ್ ಡಿ ಕುಮಾರಸ್ವಾಮಿ

Updated on: Jul 04, 2025 | 1:43 PM

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ನಡೆಯುವ ಕೆಡಿಪಿ ಸಭೆ ಮತ್ತು ಸಂಸದನ ನೇತೃತ್ವದಲ್ಲಿ ನಡೆಯುವ ದಿಶಾ ಮೀಟಿಂಗ್​ಗಳು ರಾಜಕೀಯ ನಾಯಕರಿಗೆ ಪ್ರತಿಷ್ಠೆಯ ವಿಷಯಗಳಾಗಿವೆ. ಮಂಡ್ಯದಲ್ಲಿ ಮಾತಾಡಿದ ಕುಮಾರಸ್ವಾಮಿ, ಪ್ರತಿಷ್ಠೆ ಏನೂ ಇಲ್ಲ, ಕಾಂಗ್ರೆಸ್ ನಾಯಕರ ಆಹ್ವಾನ ತನಗೇನೂ ಬೇಕಿಲ್ಲ, ಮಂಡ್ಯದ ಜನತೆ ತನಗೆ ಜವಾಬ್ದಾರಿಯನ್ನು ನೀಡಿದ್ದಾರೆ, ತನ್ನ ಡ್ಯೂಟಿಯನ್ನು ತಾನು ಮಾಡುತ್ತಿರುವುದಾಗಿ ಹೇಳಿದರು.

ಮಂಡ್ಯ, ಜುಲೈ 4: ಮೈಶುಗರ್ ಶಾಲೆಯ ಮೇಲೆ ಖಾಸಗಿ ಶಿಕ್ಷಣ ಸಂಸ್ಥೆಗಳ (private educational institutions) ಕಣ್ಣು ಬಿದ್ದಿರುವುದನ್ನು ನಾವು ವರದಿ ಮಾಡಿದ್ದೇವೆ. ಶಾಲೆಯ ಅಭಿವೃದ್ಧಿಗೆ ಮಂಡ್ಯ ಸಂಸದ ಹೆಚ್ ಡಿ ಕುಮಾರಸ್ವಾಮಿ ₹ 25 ಕೋಟಿ ಕೊಡುವುದಾಗಿ ಹೇಳಿದ್ದರು. ಅವರು ಕೊಟ್ಟರೆ ಇಸಿದುಕೊಳ್ಳುತ್ತೇವೆ ಅಂತ ಮಂಡ್ಯ ಶಾಸಕ ರವಿ ಗಣಿಗ ಹೇಳಿದ್ದು ಸಂಸದನಿಗೆ ಸಿಟ್ಟು ತರಿಸಿದೆ. ಹಣ ತೆಗೆದುಕೊಂಡು ಅವರು ಶಾಲೆಯನ್ನು ಖಾಸಗಿಯವರಿಗೆ ಕೊಡುತ್ತಾರೆ, ಯಾರಪ್ಪನ ಆಸ್ತಿ ಅದು? ಅಲ್ಲಿರುವ ಜಮೀನು ಎಷ್ಟು ಬೆಲೆಬಾಳುತ್ತದೆ ಅಂತ ಕಾಂಗ್ರೆಸ್ ನವರಿಗೆ ಏನಾದರೂ ಗೊತ್ತಿದೆಯಾ? ಎಂದು ಕುಮಾರಸ್ವಾಮಿ ಕೋಪದಲ್ಲಿ ಪ್ರಶ್ನಿಸಿದರು. ಶಾಲೆಯ ವ್ಯವಸ್ಥಾಪಕ ಮಂಡಳಿಯಲ್ಲಿ ತಾನೂ ಒಬ್ಬ ಸದಸ್ಯ, ಕಾಂಗ್ರೆಸ್ ಶಾಸಕರು ಯಾರೂ ತನ್ನಲ್ಲಿಗೆ ಬಂದು ಮಾತಾಡಿಲ್ಲ, ಶಾಲೆಯ ಪುನರುಜ್ಜೀವಕ್ಕಾಗಿ ಜಿಲ್ಲಾಧಿಕಾರಿಗಳ ಜೊತೆ ತಾನು ಮಾತಾಡುತ್ತಿರುವುದಾಗಿ ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ:  ಕೇಂದ್ರ ಸಚಿವ ಕುಮಾರಸ್ವಾಮಿ ಯೋಚನೆ ಮಾಡೋದು ಬಿಟ್ಟು ಕೆಲಸ ಮಾಡಲಿ: ರವಿ ಗಣಿಗ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More