ಪೃಥ್ವಿಸಿಂಗ್ ಮೇಲೆ ನಡೆದಿರುವ ಹಲ್ಲೆ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸುತ್ತೇನೆ: ರಮೇಶ್ ಜಾರಕಿಹೊಳಿ

ಪೃಥ್ವಿಸಿಂಗ್ ಮೇಲೆ ನಡೆದಿರುವ ಹಲ್ಲೆ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸುತ್ತೇನೆ: ರಮೇಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 05, 2023 | 2:27 PM

ರಮೇಶ್ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ರಾಜಕೀಯ ವೈಷಮ್ಯ ಕನ್ನಡಿಗರಿಗೆ ಗೊತ್ತಿಲ್ಲದಿಲ್ಲ. ಪರಸ್ಪರ ಟೀಕಾ ಪ್ರಹಾರ ನಡೆಸುವುದು ಬಹಳ ದಿನಗಳಿಂದ ನಡೆಯುತ್ತಿದೆ. ವಿಧಾನ ಸಭಾ ಚುನಾವಣೆಯಲ್ಲಿ ಹೆಬ್ಬಾಳ್ಕರ್ ರನ್ನು ಸೋಲಿಸಲು ರಮೇಶ್ ಮತ್ತು ಗೋಕಾಕ ಶಾಸಕ ಮತ್ತೊಮ್ಮೆ ವಿಧಾನ ಸಭೆಗೆ ಬರದ ಹಾಗೆ ಉಡೆಯಲು ಸಚಿವೆ ಪಟ್ಟ ಪ್ರಯತ್ನಗಳನ್ನು ರಾಜ್ಯದ ಜನತೆ ನೋಡಿದೆ.

ಬೆಳಗಾವಿ: ತಮ್ಮ ಆಪ್ತ ಪೃಥ್ವಿಸಿಂಗ್ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಬಹಳ ಉಗ್ರರಾಗಿದ್ದಾರೆ. ಬೆಳಗಾವಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಜಾರಕಿಹೊಳಿ ಕುಟುಂಬ (Jarkiholi family) ಯಾವತ್ತೂ ಚಿಲ್ಲರೆ ರಾಜಕಾರಣ ಮಾಡಿಲ್ಲ, ಪೃಥ್ವಿಸಿಂಗ್ ಪ್ರಕರಣದಲ್ಲಿ ನ್ಯಾಯ ಸಿಗುವ ನಿರೀಕ್ಷೆ ತನಗಿಲ್ಲ, ಅದನ್ನು ನ್ಯಾಯಾಲಯದಿಂದ ಪಡೆಯುವ ಪ್ರಯತ್ನ ಮಾಡುವುದರ ಜೊತೆಗೆ ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ಹೇಳಿದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನೀಡಿರುವ ಹೇಳಿಕೆ ಬಗ್ಗೆ ಅವರ ಪ್ರತಿಕ್ರಿಯೆ ಕೇಳಿದಾಗ, ಅವರೆಲ್ಲ ಲಾಟರಿ ಸಚಿವರಿ ಮತ್ತು ಲಾಟರಿ ಶಾಸಕರು, ಲಾಟರಿ ಸಚಿವೆ ಕೆಲವೇ ದಿನಗಳಲ್ಲಿ ಮಾಜಿ ಅನಿಸಿಕೊಳ್ಳಲಿದ್ದಾರೆ ಎಂದು ಹೇಳಿದರು. ಪೃಥ್ವಿಸಿಂಗ್ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ, ಪೊಲೀಸರು ತನಿಖೆ ನಡೆಸಲಿ ಅವರಿಗೆ ಒಂದಷ್ಟು ಸಮಾಯಾವಕಾಶ ನೀಡುವ ಅವಶ್ಯಕತೆಯಿದೆ ಎಂದು ಗೋಕಾಕ ಶಾಸಕ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ