‘ನಾನು ಎಷ್ಟು ಪುಣ್ಯ ಮಾಡಿದ್ದೆ ಅನಿಸ್ತಿದೆ’; ಲೀಲಾವತಿ ಭೇಟಿ ಬಳಿಕ ಭಾವುಕರಾದ ಉಮಾಶ್ರೀ

|

Updated on: Jul 10, 2023 | 12:10 PM

ಕಳೆದ ಕೆಲ ಸಮಯದಿಂದ ಲೀಲಾವತಿ ಅವರಿಗೆ ಅನಾರೋಗ್ಯ ಕಾಡಿದೆ. ಹೀಗಾಗಿ ಅವರು ಮನೆಯಲ್ಲೇ ವಾಸವಿರುತ್ತಾರೆ. ಅವರನ್ನು ಭೇಟಿ ಆಗಬೇಕು ಎಂಬುದು ಉಮಾಶ್ರೀ ಅವರ ಹಲವು ತಿಂಗಳ ಕನಸಾಗಿತ್ತು. ಅದು ಈಗ ಈಡೇರಿದೆ.

ಹಿರಿಯ ನಟಿ ಲೀಲಾವತಿ (Leelavathi) ಅವರನ್ನು ಕಂಡರೆ ಉಮಾಶ್ರೀ ಅವರಿಗೆ ಎಲ್ಲಿಲ್ಲದ ಅಭಿಮಾನ. ಕಳೆದ ಕೆಲ ಸಮಯದಿಂದ ಲೀಲಾವತಿ ಅವರಿಗೆ ಅನಾರೋಗ್ಯ ಕಾಡಿದೆ. ಹೀಗಾಗಿ ಅವರು ಮನೆಯಲ್ಲೇ ವಾಸವಿರುತ್ತಾರೆ. ಅವರನ್ನು ಭೇಟಿ ಆಗಬೇಕು ಎಂಬುದು ಉಮಾಶ್ರೀ ಅವರ ಹಲವು ತಿಂಗಳ ಕನಸಾಗಿತ್ತು. ಅದಕ್ಕೆ ಈಗ ಸಮಯ ಒದಗಿ ಬಂದಿದೆ. ಭೇಟಿ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ‘ಕಳೆದ ಎರಡು ವರ್ಷಗಳಿಂದ ಲೀಲಾವತಿ ಅವರನ್ನು ಭೇಟಿ ಮಾಡಬೇಕು ಎಂದು ಪ್ರಯತ್ನಿಸುತ್ತಲೇ ಇದ್ದೆ. ಆದರೆ, ಸಮಯ ಕೂಡಿ ಬಂದಿರಲಿಲ್ಲ. ಈಗ ಅದಕ್ಕೆ ಸಮಯ ಕೂಡಿ ಬಂತು. ನಾನು ಎಷ್ಟು ಪುಣ್ಯ ಮಾಡಿದ್ದೆ ಅನಿಸ್ತಿದೆ’ ಎಂದಿದ್ದಾರೆ ಲೀಲಾವತಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ