Loading video

ಎಲ್ಲದಕ್ಕೂ ಮಗನನ್ನೇ ಆಶ್ರಯಿಸಿಕೊಂಡಿದ್ದೆ, ಈಗ ಅವನೇ ಇಲ್ಲ: ಸುಮತಿ-ಮಂಜುನಾಥ್ ರಾವ್ ತಾಯಿ

Updated on: Apr 26, 2025 | 2:11 PM

ಎಲ್ಲ ಚೆನ್ನಾಗಿತ್ತು, ಮಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದ, ನಮ್ಮ ಆನಂದಮಯ ಮತ್ತು ನೆಮ್ಮದಿಯುಕ್ತ ಬದುಕು ವಿಧಿಗೆ ನೋಡಲಾಗಲಿಲ್ಲ ಎಂದು ಸುಮತಿ ಅವರು ದುಃಖಿಸುತ್ತಾ ಹೇಳುತ್ತಾರೆ. ಅವರ ಶೋಕ ಯಾವತ್ತಿಗೂ ಕೊನೆಗೊಳ್ಳಲಾರದು, ಪುತ್ರಶೋಕ ನಿರಂತರ ಅಂತ ಹೇಳೋದು ಸುಳ್ಳಲ್ಲ. ಸಂಬಂಧಿಕರು ತಮ್ಮೊಂದಿಗಿದ್ದಾರೆ, ತನ್ನ ತಮ್ಮ, ಪಲ್ಲವಿಯವರ ಅಣ್ಣ-ತಮ್ಮಂದಿರು ನೀಡುವ ಮಾರ್ಗದರ್ಶನದ ಮೇರೆಗೆ ಬದುಕು ನಡೆಸುತ್ತೇವೆ ಎಂದು ಹೇಳುತ್ತಾರೆ.

ಶಿವಮೊಗ್ಗ, ಏಪ್ರಿಲ್ 26: ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ ಅವರ ತಾಯಿ ಸುಮತಿ ಅತೀವ ವೇದನೆಯಿಂದ ಬಳಲುತ್ತಿದ್ದಾರೆ. ಇಳಿವಯಸ್ಸಿನಲ್ಲಿ ಅವರು ಮಗನನ್ನು ಕಳೆದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡರೂ ಎಲ್ಲ ಕೆಲಸಗಳನ್ನು ಮಾಡಿಕೊಡುತ್ತ ಮಂಜುನಾಥ್ ತಾಯಿಗೆ ಆಸರೆಯಾಗಿದ್ದರಂತೆ. ಕಾಶ್ಮೀರಕ್ಕೆ ಹೋದ ಬಳಿಕ ಆಗಾಗ್ಗೆ ಫೋನ್ ಮಾಡಿ ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಅಂತ ಮಂಜುನಾಥ್ ತಿಳಿಸುತ್ತಿದ್ದರು, ಅದರೆ ಪಹಲ್ಗಾಮ್ (Pahelgam) ಹೋಗುವಾಗ ಮಾತ್ರ, ಅಲ್ಲಿ ನೆಟ್​​ವರ್ಕ್ ಇರಲ್ಲ ಹಾಗಾಗಿ ಫೋನ್ ಮಾಡಲಾಗಲ್ಲ ಅಂತ ಹೇಳಿದ್ದರಂತೆ. ಸುಮತಿಯವರಿಗೆ ಮಗನ ಸಾವಿನ ಸುದ್ದಿ ನೆರೆಮನೆಯವರಿಂದ ಮತ್ತು ಟಿವಿಯ ಮೂಲಕ ಗೊತ್ತಾಗಿದೆ.

ಇದನ್ನೂ ಓದಿ:  ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮೃತ ಮಂಜುನಾಥ್ ಪುತ್ರ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ