ಮಾಧ್ಯಮಗಳಿಗೆ ಹೇಳಿದ್ದನ್ನೇ ಸುರ್ಜೇವಾಲಾಗೆ ಹೇಳುತ್ತೇನೆ, ಏನು ಬದಲಾವಣೆಯಾಗುತ್ತೋ ನೋಡೋಣ: ರಾಜು ಕಾಗೆ

Updated on: Jul 01, 2025 | 12:11 PM

ನನಗೆ ಮಂತ್ರಿಯಾಗುವ ಆಸೆ ಖಂಡಿತ ಇಲ್ಲ, ನನ್ನ ಹೋರಾಟ ಏನಿದ್ದರೂ ಅದು ಕ್ಷೇತ್ರದ ಜನರಿಗೋಸ್ಕರ, ಅವರ ಸಮಸ್ಯೆಗಳಿಗೆ ಪರಿಹಾರ ಬೇಕು, ಅವರಿಗೆ ಕಾಣೋದು ನಾನು, ಹಾಗಾಗಿ ಅವರ ಕಷ್ಟಗಳ ಜೊತೆ ನಿಲ್ಲಬೇಕಾಗುತ್ತದೆ ಎಂದು ರಾಜು ಕಾಗೆ ಹೇಳುತ್ತಾರೆ. ರಂದೀಪ್ ಸುರ್ಜೆವಾಲಾ ನಿನ್ನೆ ಆಳಂದ್ ಶಾಸಕ ಬಿಅರ್ ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಬೆಂಗಳೂರು, ಜುಲೈ 1: ಬೆಳಗಾವಿ ಜಿಲ್ಲೆ ಕಾಗ್ವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ರಾಜು ಕಾಗೆ (ಭರಮಗೌಡ ಆಲಗೌಡ ಕಾಗೆ) ಇಂದು ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದ ಎಐಸಿಸಿ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ (Randeep Surjewala) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನೇರ ಮಾತುಗಾರಿಕೆಗೆ ಹೆಸರಾಗಿರುವ ರಾಜು ಕಾಗೆ, ನಮ್ಮ ಪ್ರತಿನಿಧಿಯೊಂದಿಗೆ ಮಾತಾಡುತ್ತಾ, ನಿನ್ನೆ ಜರೂರು ಸಭೆಯೊಂದರ ನಿಮಿತ್ತ ಬೆಂಗಳೂರುಗೆ ಬರಲಾಗಲಿಲ್ಲ, ಇವತ್ತು ಭೇಟಿಯಾಗುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದೆ ಎಂದರು. ಮೊನ್ನೆ ಮಾಧ್ಯಮಗಳ ಮುಂದೆ ಆಡಿರುವ ಮಾತುಗಳನ್ನೇ ಸುರ್ಜೆವಾಲಾ ಅವರಿಗೆ ಹೇಳುತ್ತೇನೆ, ಯಾವೆಲ್ಲ ಬದಲಾವಣೆಗಳು ತರುತ್ತಾರೋ ಅವರಿಗೆ ಬಿಟ್ಟಿದ್ದು ಎಂದು ಕಾಗೆ ಹೇಳಿದರು.

ಇದನ್ನೂ ಓದಿ:  ಶಾಸಕ ರಾಜು ಕಾಗೆ ಮಾಡಿರುವ ಆರೋಪಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ