ಈ ಬಾರಿ ಬಿಗ್ ಬಾಸ್ನಲ್ಲಿ ಕಾಮನ್ ಮ್ಯಾನ್ ಇರ್ತಾರಾ? ಕಿಚ್ಚ ಸುದೀಪ್ ಹೇಳೋದೇನು?
ಕಳೆದ ವರ್ಷ ಬಿಗ್ ಬಾಸ್ನಲ್ಲಿ ಕೇವಲ ಸೆಲೆಬ್ರಿಟಿಗಳು ಮಾತ್ರ ಭಾಗಿ ಆಗಿದ್ದರು. ಆದರೆ, ಈ ಬಾರಿ ಆ ರೀತಿ ಇರೋದಿಲ್ಲ ಎಂದು ತಂಡದವರು ಹೇಳಿದ್ದಾರೆ. ಕಾಮನ್ ಮ್ಯಾನ್ ಇರ್ತಾರಾ ಅಥವಾ ಇಲ್ಲವಾ ಎಂಬುದು ಕೂಡ ಅಲ್ಲಿಯೇ ರಿವೀಲ್ ಆಗಲಿದೆ ಎಂದು ತಿಳಿಸಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಜೂನ್ 30ರಂದು ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ನೀಡಲಾಯಿತು. ಈ ವೇಳೆ ಈ ಬಾರಿಯ ಸೀಸನ್ನಲ್ಲಿ ಜನಸಾಮಾನ್ಯರು ಇರುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಎದುರಾಗಿದೆ. ಕೆಲವು ಸೀಸನ್ಗಳಲ್ಲಿ ಜನ ಸಾಮಾನ್ಯರಿಗೆ ಅವಕಾಶ ನೀಡಲಾಗಿತ್ತು. ಶೀಘ್ರದಲ್ಲೇ ರಿಲೀಸ್ ಆಗೋ ಪ್ರೋಮೋದಲ್ಲಿ ಮಾಹಿತಿ ಹಂಚಿಕೊಳ್ಳಲಾಗುತ್ತದೆಯಂತೆ. ಪ್ರೋಮೋನ ಅದ್ದೂರಿಯಾಗಿ ಶೂಟ್ ಮಾಡಲು ನಿರ್ಧರಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jul 01, 2025 11:44 AM