ಕೇವಲ ಹಿಂದೂಗಳ ವೋಟುಗಳಿಂದ ನಾನು ವಿಧಾನಸಭೆಗೆ ಆಯ್ಕೆಯಾಗಿದ್ದೇನೆ: ಬಸನಗೌಡ ಪಾಟೀಲ ಯತ್ನಾಳ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 03, 2022 | 12:23 PM

ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಹಿಂದೂ ಧರ್ಮ ಉಳಿಯಬೇಕಾದರೆ ಬಿಜೆಪಿ ಅಭ್ಯರ್ಥಿಗಳಿಗೆ ವೋಟು ಹಾಕಬೇಕೆಂದು ಯತ್ನಾಳ್ ಹೇಳಿದರು.

ಬಾಗಲಕೋಟೆ: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು. ಬಾಗಲಕೋಟೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತಾಡುವಾಗ ಯತ್ನಾಳ್ ಅವರು ತಾವು ಕೇವಲ ಹಿಂದೂಗಳ ವೋಟಿಗಳಿಂದ ವಿಧಾನ ಸಭೆಗೆ ಆಯ್ಕೆಯಾಗಿರುವುದಾಗಿ ಹೇಳಿದರು. ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಹಿಂದೂ ಧರ್ಮ (Hindu religion) ಉಳಿಯಬೇಕಾದರೆ ಬಿಜೆಪಿ ಅಭ್ಯರ್ಥಿಗಳಿಗೆ ವೋಟು ಹಾಕಬೇಕೆಂದು ಅವರು ಹೇಳಿದರು. ಬಾಗಲಕೋಟೆಯ ಶಾಸಕರ ವೀರಣ್ಣ ಚರಂತಿಮಠರನ್ನು (Veeranna Charanthimath) ಕೊಂಡಾಡಿದ ಯತ್ನಾಳ್ ಬಳಿಕ, ಮೊದಲು ಅವರು (ಚರಂತಿಮಠ) ಬಜಾಜ್ ಎಮ್-80 ಯಲ್ಲಿ ಓಡಾಡುತ್ತಿದ್ದರು ಈಗ ಇನ್ನೋವಾನಲ್ಲಿ ಓಡಾಡುತ್ತಿದ್ದಾರೆ ಅಂತ ಕಾಲೆಳೆದರು.