Abhishek Ambareesh: ಅಭಿಷೇಕ್ ಅಂಬರೀಷ್ ಮದುವೆ ಯಾವಾಗ? ಬರ್ತ್ಡೇ ದಿನವೇ ನಗುತ್ತ ಪ್ರತಿಕ್ರಿಯೆ ನೀಡಿದ ಸುಮಲತಾ
Sumalatha Ambareesh: ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅಭಿಷೇಕ್ ಅಂಬರೀಷ್ ಅವರು ಆದಷ್ಟು ಬೇಗ ಮದುವೆ ಆಗಲಿ ಎಂಬುದು ಫ್ಯಾನ್ಸ್ ಬಯಕೆ. ಈ ಬಗ್ಗೆ ಸುಮಲತಾ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
ನಟ ಅಭಿಷೇಕ್ ಅಂಬರೀಷ್ (Abhishek Ambareesh) ಅವರಿಗೆ ಇಂದು (ಅ.3) ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ನಿವಾಸದಲ್ಲಿ ಅಭಿಮಾನಿಗಳ ಜೊತೆ ಅವರು ಬರ್ತ್ಡೇ ಆಚರಿಸಿಕೊಂಡಿದ್ದಾರೆ. ತಾಯಿ ಸುಮಲತಾ ಅಂಬರೀಷ್ (Sumalatha Ambareesh) ಕೂಡ ಭಾಗಿ ಆಗಿದ್ದಾರೆ. ಈ ವೇಳೆ ‘ಅಭಿಷೇಕ್ ಮದುವೆ (Marriage) ಯಾವಾಗ’ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ನಗುತ್ತಲೇ ಪ್ರತಿಕ್ರಿಯೆ ನೀಡಿದ ಸುಮಲತಾ, ‘ನನ್ನ ಬದಲು ಇದನ್ನು ನೀವು ಅವರಿಗೇ ಕೇಳಬೇಕು’ ಎಂದು ಮಗನ ಕಡೆ ಮುಖ ಮಾಡಿದ್ದಾರೆ. ಪಕ್ಕದಲ್ಲೇ ಇದ್ದ ಅಭಿಷೇಕ್ ನಕ್ಕು ಸುಮ್ಮನಾಗಿದ್ದಾರೆ. ಸದ್ಯ ಅವರು ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ.
Published on: Oct 03, 2022 12:55 PM
Latest Videos