ಭಾರತ್ ಜೋಡೋ ಯಾತ್ರೆಯಲ್ಲಿ ಎಲ್ಲ ಧರ್ಮಗಳ ಪ್ರಾರ್ಥನಾ ಸ್ಥಳಗಳಿಗೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿ

ಭಾರತ್ ಜೋಡೋ ಯಾತ್ರೆಯಲ್ಲಿ ಎಲ್ಲ ಧರ್ಮಗಳ ಪ್ರಾರ್ಥನಾ ಸ್ಥಳಗಳಿಗೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 03, 2022 | 10:51 AM

ನಗರದಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಜೊತೆ ಆಜಂ ಮಸೀದಿಗೆ ತೆರಳಿದ್ದ ರಾಹುಲ್ ನಂತರ ಮಸೀದಿ ಪಕ್ಕದಲ್ಲೇ ಇರುವ ಕೆಥೋಲಿಕ್ ಚರ್ಚ್ ಗೂ ಭೇಟಿ ನೀಡಿದರು.

ಮೈಸೂರು: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಅಭಿಯಾನಾದ ಕರ್ನಾಟಕ ಲೆಗ್ ನ 4ನೇ ದಿನವಾಗಿರುವ ಸೋಮವಾರ ರಾಹುಲ್ ಗಾಂಧಿ (Rahul Gandhi), ಸಿದ್ದರಾಮಯ್ಯ (Siddaramaiah) ಮತ್ತು ಪಕ್ಷದ ಸಾವಿರಾರು ಕಾರ್ಯಕರ್ತರು ಮೈಸೂರಲ್ಲಿ ಪಾದಯಾತ್ರೆ ಮುಂದುವರಿಸಿದರು. ಈ ಅಭಿಯಾನದಲ್ಲಿ ರಾಹುಲ್, ದೇವಸ್ಥಾನಗಳ ಜೊತೆಗೆ ಮಸೀದಿ ಮತ್ತು ಚರ್ಚ್ಗಳಿಗೂ ಭೇಟಿ ನೀಡುತ್ತಿದ್ದಾರೆ. ನಗರದಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ (Tanveer Sait) ಜೊತೆ ಆಜಂ ಮಸೀದಿಗೆ ತೆರಳಿದ್ದ ಅವರು ನಂತರ ಮಸೀದಿ ಪಕ್ಕದಲ್ಲೇ ಇರುವ ಸೆಂಟ್ ಫಿಲೋಮಿನಾಸ್  ಕೆಥಿಡ್ರಲ್​ಗೂ ಭೇಟಿ ನೀಡಿದರು.