ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರಕ್ಕೆ ಬಂದರೆ ನನಗೆ ಪಕ್ಷಗಳು ನಗಣ್ಯ: ಬಸನಗೌಡ ಪಾಟೀಲ್ ಯತ್ನಾಳ್

ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರ ಬಂದರೆ ತಾನು ಕಾಂಗ್ರೆಸ್, ಬಿಜೆಪಿ ಅಂತ ನೋಡೋದಿಲ್ಲ, ತನಗೆ ಬೇಕಿರೋದು ಈ ಭಾಗದ ಅಭಿವೃದ್ಧಿ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದ ಎಲ್ಲ ಶಾಸಕರು ಪಕ್ಷಭೇದ ಮರೆತು ಯತ್ನಾಳ್ ಅವರ ಹಾಗೆ ಗಟ್ಟಿಧ್ವನಿ ಎತ್ತಿದರೆ ಅದು ಖಂಡಿತವಾಗಿಯೂ ಸರ್ಕಾರವನ್ನು ಬಡಿದೆಬ್ಬಿಸುತ್ತದೆ.

ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರಕ್ಕೆ ಬಂದರೆ ನನಗೆ ಪಕ್ಷಗಳು ನಗಣ್ಯ: ಬಸನಗೌಡ ಪಾಟೀಲ್ ಯತ್ನಾಳ್
|

Updated on: Dec 12, 2023 | 2:37 PM

ಬೆಳಗಾವಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ (Basangouda Patil Yatnal) ಇಂದು ಅಧಿವೇಶನದಲ್ಲ ಉತ್ತರ ಕರ್ನಾಟಕದ (north Karnataka) ಸಮಸ್ಯೆಗಳ ಬಗ್ಗೆ ಬಹಳ ಕಳಕಳಿಯಿಂದ ಮಾತಾಡುತ್ತಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕಾಲೆಳೆದರು. ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪ ಮಾಡುವವನನ್ನು ತುಳಿದು ಬಿಡುವ ಪ್ರಯತ್ನ ನಡೆಯುತ್ತದೆ, ಅವನನ್ನು ಮೂಲೆಗುಂಪು ಮಾಡಲಾಗುತ್ತದೆ, ಉತ್ತರ ಕರ್ನಾಟಕದ ಒಬ್ಬ ಶಾಸಕ ಜನಪ್ರಿಯನಾಗುವ ಅವಕಾಶವೇ ಇಲ್ಲ ಎಂದು ಬಸನಗೌಡ ಯತ್ನಾಳ್ ಹೇಳಿದರು. ಕಳಸಾ ಬಂಡೂರಿ ಯೋಜನೆಯನ್ನು ಪ್ರಸ್ತಾಪಿಸುವಾಗಲೇ ಅವರು ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೇಕೆದಾಟು ಯೋಜನೆ ಜಾರಿ ಆಗ್ರಹಿಸಿ ನಡೆದ ಪಾದಯಾತ್ರೆಯನ್ನು ಗೇಲಿ ಮಾಡಿದರು. ಯೋಜನೆ ಮಾತ್ರ ಉಳಿದಿದೆ ಮೇಕೆಗಳನ್ನೆಲ್ಲ ಪಾದಯಾತ್ರೆ ಮಾಡಿದವರು ನುಂಗಿಬಿಟ್ಟರು ಅಂತ ಯತ್ನಾಳ್ ಹೇಳಿದಾಗ ಸದನದಲ್ಲಿ ನಗುವಿನ ಅಲೆ ಎದ್ದಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us