ಬಿಜೆಪಿ ನಾಯಕರು ಸಾಚಾಗಳಾಗಿದ್ದರೆ ನಮ್ಮಂತೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ಶಾಸಕ ಶಿವಲಿಂಗೇಗೌಡ ಅಭಿಮಾನಿಗಳು
ಶಿವಲಿಂಗೇಗೌಡರ ಹೆಸರಿಗೆ ಕಳಂಕ ತರಲು ಬಿಜೆಪಿ ನಾಯಕರು ವೃಥಾ ಮತ್ತು ವ್ಯರ್ಥ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಹಾಸನ: ಬಿಜೆಪಿ ನಾಯಕರು ತಮ್ಮನ್ನು ರಾಗಿಕಳ್ಳ ಎಂದು ಹೇಳಿದ್ದು ಅರಸೀಕೆರೆ (Arasikere) ಶಾಸಕ ಶಿವಲಿಂಗೇಗೌಡರು (Shivalingegowda) ಮತ್ತು ಅವರ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಕಳೆದ 15 ವರ್ಷಗಳಿಂದ ವಿಧಾನಸಭೆ (Assembly) ಆಯ್ಕೆಯಾಗುತ್ತಿರುವ ಮತ್ತು ಬೇರೆ ಪಕ್ಷಗಳ ನಾಯಕರು ಹುಬ್ಬೇರಿಸುವ ಹಾಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಶಿವಲಿಂಗೇಗೌಡರ ಹೆಸರಿಗೆ ಕಳಂಕ ತರಲು ಬಿಜೆಪಿ ನಾಯಕರು ವೃಥಾ ಮತ್ತು ವ್ಯರ್ಥ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಶಿವಲಿಂಗೇಗೌಡ ಮತ್ತು ಅಭಿಮಾನಿಗಳು; ಶಾಸಕರು ಏನನ್ನೂ ಕದ್ದಿಲ್ಲವೆಂದು ಆಣೆ ಮಾಡಲು ಧರ್ಮಸ್ಥಳಕ್ಕೆ ಹೊರಟಿದ್ದು, ಬಿಜೆಪಿ ನಾಯಕರು ಸಾಚಾಗಳಾಗಿದ್ದರೆ ತಮ್ಮಂತೆ ಆಣೆ ಮಾಡುವಂತೆ ಸವಾಲೆಸೆದರು.
Latest Videos