ಚಾಮರಾಜನಗರದಲ್ಲೂ ನಿಲ್ಲದ ಮಳೆ, ಮದುವೆ ನಡೆಯುತ್ತಿದ್ದ ಕಲ್ಯಾಣಮಂಟಪ ಸಂಪೂರ್ಣ ಜಲಾವೃತ!

ಚಾಮರಾಜನಗರದಲ್ಲೂ ನಿಲ್ಲದ ಮಳೆ, ಮದುವೆ ನಡೆಯುತ್ತಿದ್ದ ಕಲ್ಯಾಣಮಂಟಪ ಸಂಪೂರ್ಣ ಜಲಾವೃತ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 29, 2022 | 3:53 PM

ಸೋಮವಾರ ಇಲ್ಲಿ ಮದುವೆಯೊಂದು ನಡೆದಿದ್ದು ಕಲ್ಯಾಣ ಮಂಟಪ ಅಡುಗೆ ಮನೆ ಸಹ ಜಲಾವೃತಗೊಂಡಿದೆ. ಮದುವೆಗೆ ಆಗಮಿಸಿರುವ ಅತಿಥಿಗಳು ಊಟದ ಹಾಲ್ ನಲ್ಲಿ ನೀರು ಸೇರಿಕೊಂಡಿದ್ದರೂ ಚೇರ್ ಗಳ ಮೇಲೆ ಕೂತು ಊಟ ಮಾಡುತ್ತಿದ್ದಾರೆ.

ಚಾಮರಾಜನಗರ:  ರಾಮನಗರಗದಂತೆ ಚಾಮರಾಜನಗರದಲ್ಲೂ (Chamarajanagar) 2-3 ದಿನಗಳಿಂದ ಮಳೆ ಒಂದೇ ಸಮ ಸುರಿಯುತ್ತಿದೆ. ಚಾಮರಾಜನಗರ ಪಟ್ಟಣದ ಹೃದಯ ಭಾಗದಲ್ಲಿರುವ ಕಲ್ಯಾಣ ಮಂಟಪವೊಂದು ಅಕ್ಷರಶಃ ಕೆರೆಯಾಗಿ (Lake) ಮಾರ್ಪಟ್ಟಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಸೋಮವಾರ ಇಲ್ಲಿ ಮದುವೆಯೊಂದು ನಡೆದಿದ್ದು ಕಲ್ಯಾಣ ಮಂಟಪ ಅಡುಗೆ ಮನೆ (Kitchen) ಸಹ ಜಲಾವೃತಗೊಂಡಿದೆ. ಮದುವೆಗೆ ಆಗಮಿಸಿರುವ ಅತಿಥಿಗಳು ಊಟದ ಹಾಲ್ ನಲ್ಲಿ ನೀರು ಸೇರಿಕೊಂಡಿದ್ದರೂ ಚೇರ್ ಗಳ ಮೇಲೆ ಕೂತು ಊಟ ಮಾಡುತ್ತಿದ್ದಾರೆ.