ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಬಡ ಮಹಿಳೆಯರಿಗೆ ಮಾಸಿಕ ₹ 10,000 ನೆರವು ಸಿಗಲಿದೆ: ಜಮೀರ್ ಅಹ್ಮದ್

|

Updated on: Apr 18, 2024 | 11:12 AM

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಧಿಕಾರಕ್ಕೆ ಬಂದರೆ, ದೇಶದ ಎಲ್ಲ ಬಡವರ್ಗದ ಮಹಿಳೆಯರಿಗೆ ವಾರ್ಷಿಕ ತಲಾ ಒಂದು ಲಕ್ಷ ರೂ. ಕೊಡುವ ಭರವಸೆಯನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೀಡಿದ್ದಾರೆ. ವಾರ್ಷಿಕ ₹ 1,00,000 ಅಂದರೆ, ತಿಂಗಳಿಗೆ ₹ 8,000, ತಮ್ಮ ಸರ್ಕಾರ ಪ್ರತಿ ತಿಂಗಳು ಕೊಡುತ್ತಿರುವ ₹ 2,000 ಸೇರಿಸಿದರೆ ಪ್ರತಿ ಹೆಣ್ಣುಮಗಳಿಗೆ ತಿಂಗಳಿಗೆ ₹ 10,000 ಸಿಗಲಿದೆ ಎಂದು ಜಮೀರ್ ಅಹ್ಮದ್ ಹೇಳಿದರು.

ವಿಜಯನಗರ: ಮೊನ್ನೆಯಷ್ಟೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಎದೆನೋವು ಅನುಭವಿಸಿ ಆಸ್ಪತ್ರೆಗೆ ಹೋಗಿದ್ದ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಇಂದು ಹೊಸಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ (Raj Shekhar Hitnal) ಪರ ಪ್ರಚಾರ ಮಾಡಿದರು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಈಗಿನ ಬೆಲೆಗಳೊಂದಿಗೆ ಹೋಲಿಕೆ ಮಾಡಿದ ಜಮೀರ್, ಈಗ ಎಲ್ಲ ಬೆಲೆಗಳು ಎರಡು ಪಟ್ಟು ಹೆಚ್ಚಿವೆ ಅಂತ ಹೇಳಿದರು. ನಂತರ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾಡುವಾಗ ಅವರು, ತಮ್ಮ ಗುರು ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಶೈಲಿಯನ್ನು ಅನುಕರಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಧಿಕಾರಕ್ಕೆ ಬಂದರೆ, ದೇಶದ ಎಲ್ಲ ಬಡವರ್ಗದ ಮಹಿಳೆಯರಿಗೆ ವಾರ್ಷಿಕ ತಲಾ ಒಂದು ಲಕ್ಷ ರೂ. ಕೊಡುವ ಭರವಸೆಯನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೀಡಿದ್ದಾರೆ. ವಾರ್ಷಿಕ ₹ 1,00,000 ಅಂದರೆ, ತಿಂಗಳಿಗೆ ₹ 8,000, ತಮ್ಮ ಸರ್ಕಾರ ಪ್ರತಿ ತಿಂಗಳು ಕೊಡುತ್ತಿರುವ ₹ 2,000 ಸೇರಿಸಿದರೆ ಪ್ರತಿ ಹೆಣ್ಣುಮಗಳಿಗೆ ತಿಂಗಳಿಗೆ ₹ 10,000 ಸಿಗಲಿದೆ ಎಂದು ಜಮೀರ್ ಅಹ್ಮದ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಶಿವಕುಮಾರ್ ಮಾತಿನ ಅರ್ಥ ಸಿದ್ದರಾಮಯ್ಯ ಸರ್ಕಾರದಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ, ಅಲ್ಲವೇ? ಹೆಚ್ ಡಿ ಕುಮಾರಸ್ವಾಮಿ

Follow us on