ದೇವರಾಜೇಗೌಡ ಜೈಲಿಂದ ಹೊರಬಂದ ದಿನ ಸರ್ಕಾರ ಉರುಳೋದಾದರೆ ಅವರು ಅಲ್ಲೇ ಇರಲಿ: ಜಿ ಪರಮೇಶ್ವರ್, ಗೃಹ ಸಚಿವ

|

Updated on: May 18, 2024 | 7:02 PM

ಬಿಜೆಪಿ ನಾಯಕರು ಹೇಳಿದ ಹಾಗೆ ನಾವು ಸರ್ಕಾರ ನಡೆಸಲಾಗಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ, ಬಿಜೆಪಿಯರು ಎಷ್ಟೇ ಪ್ರಯತ್ನಪಟ್ಟರೂ ಜನರ ನೆಮ್ಮದಿ ಹಾಳಾಗಲು ತಮ್ಮ ಸರ್ಕಾರ ಬಿಡಲ್ಲ ಎಂದು ಪರಮೇಶ್ವರ್ ಹೇಳಿದರು.

ತುಮಕೂರು: ಬಿಜೆಪಿ ನಾಯಕರು ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ನಡೆದ ಅಪರಾಧ ಪ್ರಮಾಣದ ಬಗ್ಗೆ ಮಾತಾಡಲ್ಲ, ಅಂಕಿ-ಅಂಶಗಳನ್ನು (stats) ತೆಗೆದು ನೋಡಿದರೆ ಬಿಜೆಪಿ ಅಧಿಕಾರಾವಧಿಯಲ್ಲಿ ಅಪರಾಧ ಪ್ರಮಾಣ ಜಾಸ್ತಿಯಿತ್ತು ಮತ್ತು ಅವರ ಅವಧಿಯಲ್ಲೇ ಹೆಚ್ಚು ಕೊಲೆಗಳು ನಡೆದಿದ್ದು ಅನ್ನೋದು ಗೊತ್ತಾಗುತ್ತೆ ಅಂತ ಗೃಹ ಸಚಿವ ಜಿ ಪರರಮೇಶ್ವರ್ (G Parameshwara) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಅವರು, ಬಿಜೆಪಿ ನಾಯಕರು ಹೇಳಿದ ಹಾಗೆ ನಾವು ಸರ್ಕಾರ ನಡೆಸಲಾಗಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ (law and order) ಚೆನ್ನಾಗಿದೆ, ಬಿಜೆಪಿಯರು ಎಷ್ಟೇ ಪ್ರಯತ್ನಪಟ್ಟರೂ ಜನರ ನೆಮ್ಮದಿ ಹಾಳಾಗಲು ತಮ್ಮ ಸರ್ಕಾರ ಬಿಡಲ್ಲ ಎಂದು ಪರಮೇಶ್ವರ್ ಹೇಳಿದರು. ದೇವರಾಜೇಗೌಡರು, ಡಿಕೆ ಶಿವಕುಮಾರ್ 100 ಕೋಟಿ ರೂ ಆಮಿಶವೊಡ್ಡಿದ ಬಗ್ಗೆ ಮಾತಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಆ ಅಂಶವನ್ನೂ ಎಸ್ಐಟಿ ತನ್ನ ತನಿಖೆಯಲ್ಲಿ ಸೇರಿಸಿಕೊಳ್ಳಲಿದೆ ಎಂದು ಹೇಳಿದರು. ತಾನು ಜೈಲಿಂದ ಹೊರಬಂದ ದಿನ ರಾಜ್ಯದಲ್ಲಿ ಕಾಂಗ್ರೆಸ್ ಪತನಗೊಳ್ಳುತ್ತದೆ ಎಂದು ದೇವರಾಜೇಗೌಡರು ಹೇಳಿರುವುದಕ್ಕೆ ಉತ್ತರಿಸಿದ ಗೃಹ ಸಚಿವ, ಹಾಗಾದರೆ ಅವರು ಜೈಲಲ್ಲೇ ಇರಲಿ ಎಂದು ನಗುತ್ತಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸರ ಲೋಪವೂ ಇದೆ: ಜಿ ಪರಮೇಶ್ವರ್​

Follow us on